ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಫಾಲ್ಸ್ ಗೆ ಜಾರಿ  ಬಿದ್ದು ನಾಲ್ವರು ಯುವತಿಯರ ಸಾವು, ಓರ್ವಳ ಸ್ಥಿತಿ ಗಂಭೀರ – Vishwanews24

Featured, ರಾಜ್ಯ ನ್ಯೂಸ್

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಫಾಲ್ಸ್ ಗೆ ಜಾರಿ  ಬಿದ್ದು ಬೆಳಗಾವಿಯ ನಾಲ್ವರು ಯುವತಿಯರ ಸಾವು, ಓರ್ವಳ ಸ್ಥಿತಿ ಗಂಭೀರ

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಫಾಲ್ಸ್‌ಗೆ ಜಾರಿ ಬಿದ್ದು ನಾಲ್ಕು ಯುವತಿಯರು ಸಾವನ್ನಪ್ಪಿರುವ ಘಟನೆ ಕೀತವಾಡ ಫಾಲ್ಸ್‌ ಬಳಿ ನಡೆದಿದೆ. ಮೃತಪಟ್ಟ ಯುವತಿಯರನ್ನುಬೆಳಗಾವಿಯವರು ಅಂತ ತಿಳಿದು ಬಂದಿದೆ. ಘಟನೆಯಲ್ಲಿ ಐವರು ಕಿತವಾಡ ಫಾಲ್ಸ್‌ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆಯಲ್ಲಿ ಐವರು ಅಯತಪ್ಪಿ ಫಾಲ್ಸ್‌ಗೆ ಬಿದ್ದಿದ್ದಾರೆ ಎನ್ನಲಾಗಿದ್ದು,ಈ ಪೈಕಿ ನಾಲ್ವರು ಸಾವನ್ನಪ್ಪಿದ್ದು, ಓರ್ವಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಮಂಗಳೂರು : ಪಾರ್ಕಿಂಗ್ ಮಾಡಿದ್ದ ಕಾರು ಬೆಂಕಿಗಾಹುತಿ – Vishwanews24

ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಪ್ರವಾಸಕ್ಕೆ 40 ಯುವತಿಯ ತಂಡ ಕಿತವಾಡ ಫಾಲ್ಸ್‌ಗೆ ಹೋಗಿತ್ತು ಎನ್ನಲಾಗಿದೆ. ಬೆಳಗಾವಿಯ ಉಜ್ವಲ್ ನಗರ ಆಸೀಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಹಾಸ್‌ಂ ಪಟೇಲ್(20), ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20), ತಸ್ಮಿಯಾ(20) ಮೃತಪಟ್ಟ ದುರ್ದೈವಿಗಳು ಆಗಿದ್ದಾರೆ.

Leave a Reply