ಬೆಳಪುವಿನಲ್ಲಿ ಬೃಹತ್ ವನಮಹೋತ್ಸವ – ಹಸಿರು ಗ್ರಾಮ ನಮ್ಮ ಸಂಕಲ್ಪ: ಡಾ| ದೇವಿಪ್ರಸಾದ್ ಶೆಟ್ಟಿ – vishwanews24
ಬೆಳಪುವಿನಲ್ಲಿ ಬೃಹತ್ ವನಮಹೋತ್ಸವ – ಹಸಿರು ಗ್ರಾಮ ನಮ್ಮ ಸಂಕಲ್ಪ: ಡಾ| ದೇವಿಪ್ರಸಾದ್ ಶೆಟ್ಟಿ
ಬೆಳಪು ಗ್ರಾಮದ ಎಲ್ಲಾ ರಸ್ತೆಗಳ ಬದಿಯಲ್ಲಿ ಹಾಗೂ ಕೈಗಾರಿಕಾ ಪಾರ್ಕ್ನಲ್ಲಿ ಹಸಿರುವನ ಮಾಡುವ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ|ದೇವಿಪ್ರಸಾದ್ ಶೆಟ್ಟಿ ಬೆಳಪು ಚಾಲನೆ ನೀಡಿದರು.
ಬೆಳಪು ಗ್ರಾಮದಲ್ಲಿ ಕಳೆದ ೨೫ ವರ್ಷಗಳಿಂದ ನಿರಂತರ ಬೃಹತ್ ವನ ಮಹೋತ್ಸವ ಕಾರ್ಯಕ್ರಮ ಜರಗುತ್ತಿದ್ದು, “ಮನೆಗೊಂದು ಮಗು ಮಗುವಿಗೊಂದು ಗಿಡ” ಯೋಜನೆ, ರೈತರ ಜಮೀನಿನಲ್ಲಿ ವನ ರಚನೆ, ಪಂಚಾಯತ್ ಕಾಡು ಪ್ರದೇಶದಲ್ಲಿ ಲಕ್ಷ ಸಸಿ ನೆಡುವ ಕಾರ್ಯಕ್ರಮ, ಶಾಲೆಯಲ್ಲಿ
“ಚಿಣ್ಣರ ವನ” ರಚನೆ, ಪ್ರತಿ ಮನೆಗೂ ಅವರ ಬೇಡಿಕೆಯಂತೆ ಉಚಿತ ಗಿಡ ನೀಡುವ ಕಾರ್ಯಕ್ರಮ ನಡೆಸುವ ಮೂಲಕ ಗ್ರಾಮವನ್ನು ಪರಿಸರ ಕಾಳಜಿಯೊಂದಿಗೆ ಹಸಿರು ಗ್ರಾಮವನ್ನಾಗಿಸುವ ಸಂಕಲ್ಪ ಹೊ0ದಲಾಗಿದೆ0ದು ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಸತತ 2ನೇ ಅವಧಿಗೆ ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡ ಜೈ ಶಂಕರ್ – vishwanews24
ಪ್ರಸಕ್ತ ವರ್ಷ ಬೆಳಪು ಗ್ರಾಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅತ್ಯಾಧುನಿಕ ಸಂಶೋಧನಾ ಕೇ0ದ್ರ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕೈಗಾರಿಕಾ ಪಾರ್ಕ್ ಮತ್ತು ಹಿಂದೂ ರುದ್ರಭೂಮಿ ಹಾಗೂ ದಫನಭೂಮಿಯಲ್ಲಿ ಗಿಡ ನೆಡುವ ಯೋಜನೆಗೆ ಚಾಲನೆ ನೀಡಲಾಗುವುದೆಂದು ಶೆಟ್ಟಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕಾಪು ಉಪ ವಲಯ ಅರಣ್ಯಾಧಿಕಾರಿಯವರಾದ ಜೀವನ್‌ದಾಸ್ ಶೆಟ್ಟಿ, ಗಸ್ತು ಅರಣ್ಯಪಾಲಕರಾದ ಮಂಜುನಾಥ, ಗಸ್ತು ಅರಣ್ಯಪಾಲಕರಾದ ಅಖಿಲೇಶ್ ಮತ್ತು ಪಂಚಾಯತ್ ಸದಸ್ಯರಾದ ಶ್ರೀ ಸುಲೇಮಾನ್, ಪ್ರಮುಖರಾದ ಸುದರ್ಶನ್ ಪೂಜಾರಿ, ಗಿರೀಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ದರ್ಶನ್ ಬಂಧನ : ವಿಚಾರಣೆಯ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು : ಪೊಲೀಸ್ ಕಮಿಷನರ್ – vishwanews24
