ಬೆಳ್ತಂಗಡಿ: ಆಟೋ ರಿಕ್ಷಾ ದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಚಾಲಕನ ಸಹಿತ ಇಬ್ಬರ ಬಂಧನ – Vishwanews24
ಬೆಳ್ತಂಗಡಿ: ಆಟೋ ರಿಕ್ಷಾ ದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ..
ಚಾಲಕ ಸಾದಿಕ್ ಮತ್ತು ಸ್ಥಳೀಯ ನಿವಾಸಿ ಕರೀಂ ಬಂಧನ..
ಬೆಳ್ತಂಗಡಿ: ಬಂದಾರು ಗ್ರಾಮದ ನೆರೋಲ್ದಪಲ್ಕೆ ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಆಟೋ ರಿಕ್ಷಾದಲ್ಲಿ ಕರೆದೊಯ್ದು ಆಕೆಗೆ ಮರ್ಯಾದೆಗೆ ಲೈಂಗಿಕ ಕಿರುಕುಳ ನಿಡಿರುವ ಆರೋಪದ ಮೇಲೆ ಆಟೋ ರಿಕ್ಷಾ ಚಾಲಕ ಹಾಗೂ ಮತ್ತೊಬ್ಬನ ಮೇಲೆ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ರಿಕ್ಷಾ ಚಾಲಕ ಸಾದಿಕ್ ಮತ್ತು ಸ್ಥಳೀಯ ನಿವಾಸಿ ಕರೀಂ ಅವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜೂನ್ 18 ರಂದು 17 ವರ್ಷದ ಸಂತ್ರಸ್ತ ಬಾಲಕಿ ತನ್ನ ತಾಯಿ ಪಡೆದ ಸಾಲದ ಕಂತು ಪಾವತಿಸಲು ಸ್ವಸಹಾಯ ಸಂಘದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಳು. ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಪರಿಚಯವಿರುವ ಕರೀಂ ಮತ್ತು ಆಟೋ ಚಾಲಕ ಸಾದಿಕ್ ಎಂಬಾತ ಬಾಲಕಿಯ ಕುಟುಂಬದೊಂದಿಗೆ ಇರುವ ಪರಿಚಯವನ್ನು ದುರುಪಯೋಗಪಡಿಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ.
ಪುತ್ತೂರು : ಯುವಕರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ – ಡಿವೈಎಸ್ಪಿ ಗೆ ಜಾಮೀನು – Vishwanews24
ಕರೀಂ ಸಂತ್ರಸ್ತ ಬಾಲಕಿಗೆ 200 ರೂ ನೀಡಿ ತನ್ನೊಂದಿಗೆ ಆಟೋ ರಿಕ್ಷಾದಲ್ಲಿ ಬೆಳ್ತಂಗಡಿಗೆ ಬರುವಂತೆ ಆಮಿಷ ಒಡ್ಡಿ ಕಿರುಕುಳ ನೀಡಿದ್ದಾನೆ. ಸಂತ್ರಸ್ತ ಬಾಲಕಿ ಇದನ್ನು ವಿರೋಧಿಸಿ ಆಟೋ ರಿಕ್ಷಾದಿಂದ ಜಿಗಿದಿದ್ದಾಳೆ. ಆಕೆಯ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಬಾಲಕಿ ವಾಹನದಿಂದ ಜಿಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಸಂತ್ರಸ್ತ ಬಾಲಕಿ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
ಪುತ್ತೂರು: ಕಾರು ಹಾಗು ದ್ವಿಚಕ್ರ ವಾಹನ ನಡುವೆ ಅಪಘಾತ – ಸವಾರ ಮೃತ್ಯು – Vishwanews24
