ಬೆಳ್ತಂಗಡಿ: ದಿಡುಪೆ ಜಲಪಾತದಲ್ಲಿ ನೈತಿಕ ಪೊಲೀಸ್‌ಗಿರಿ ;  ಐವರ ವಿರುದ್ಧ ಪ್ರಕರಣ ದಾಖಲು – vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ: ದಿಡುಪೆ ಜಲಪಾತದಲ್ಲಿ ನೈತಿಕ ಪೊಲೀಸ್‌ಗಿರಿ ;  ಐವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ : ದಿಡುಪೆಯ ಜಲಪಾತದಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಘಟನೆಯ ನಂತರ ಬೆಳ್ತಂಗಡಿ ಪೊಲೀಸರು ಐವರನ್ನು ಮತ್ತು ಇತರ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜಲಪಾತ ನೋಡಲು ಮಂಗಳೂರಿನಿಂದ ಬಂದಿದ್ದ ಯುವಕ ಹಾಗೂ ಯುವತಿಗೆ ರಸ್ತೆಯಲ್ಲಿ ತಡೆದು ಜೀವ ಬೆದರಿಕೆ ಹಾಕಿರುವ ಬಗ್ಗೆ ಯುವತಿ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಬೆಂಗಳೂರು: ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ AI ವಿವಿ ಸ್ಥಾಪನೆ: ಡಿಕೆಶಿ ಘೋಷಣೆ  – vishwanews24

ದಿಡುಪೆ ನಿವಾಸಿಗಳಾದ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್‌ ಹಾಗೂ ಇತರರ ವಿರುದ್ಧ ಪ್ರಕರಣ‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನಿಂದ ಯುವತಿ ತನ್ನ ಸ್ನೇಹಿತನೊಂದಿಗೆ ಜಲಪಾತ ನೋಡಲು ಜು.12 ರಂದು ದಿಡುಪೆಗೆ ಹೋಗಿದ್ದು, ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ಅನುಮತಿ ಪಡೆದು ಜಲಪಾತಕ್ಕೆ ತೆರಳಿ ಹಿಂತಿರುಗಿ ಬರವು ವೇಳೆ‌ ಯುವತಿಯನ್ನು ತಡೆದ ಸ್ಥಳೀಯ ಯುವಕರ ತಂಡ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.

ಇದನ್ನೂ ಓದಿ:

ಬೆಂಗಳೂರು: ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ AI ವಿವಿ ಸ್ಥಾಪನೆ: ಡಿಕೆಶಿ ಘೋಷಣೆ  – vishwanews24

ಯುವತಿಯ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಹಿತೆ 126(2), 352, 351(2) ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ‌ ದಾಖಲಿಸಿಕೊಂಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Leave a Reply