ಬೆಳ್ತಂಗಡಿ: ಪಡ್ಡಂದಡ್ಕ ಜಾಂಡೀಸ್‌ಗೆ ಯುವಕ ಬಲಿ  – Vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ: ಪಡ್ಡಂದಡ್ಕ ಜಾಂಡೀಸ್‌ಗೆ ಯುವಕ ಬಲಿ 

ಬೆಳ್ತಂಗಡಿ: ಜಾಂಡೀಸ್‌ ಬಳಲುತ್ತಿದ್ದ ಯುವಕ‌ ಸಾವನ್ನಪ್ಪಿರುವ ಘಟನೆ ಪಡ್ಡಂದಡ್ಕ ಕಜೆಮನೆ ಎಂಬಲ್ಲಿ ನಡೆದಿದೆ. ಕಿಶೋರ್‌ ಆಚಾರ್ಯ (22) ಮೃತ ದುರ್ದೈವಿ.

ಕೃಷ್ಣಯ್ಯ ಮತ್ತು ಪದ್ಮಾವತಿ ದಂಪತಿಯ ಪುತ್ರ ಕಿಶೋರ್‌ ಆಚಾರ್ಯ ಅವರಿಗೆ ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು.

ಆದರೆ ಅ. 26ರಂದು ಜ್ವರ ಮತ್ತೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಾಂಡೀಸ್‌ ಎಂದು ಖಚಿತಪಡಿಸಿದ್ದರು ಎನ್ನಲಾಗಿದೆ. ಇದರಿಂದ ಅಂಗಾಂಗ ವೈಫಲ್ಯಕ್ಕೊಳಗಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ನ. 3 ರವರೆಗೆ ಸುರತ್ಕಲ್ ಟೋಲ್ ಪ್ಲಾಜಾ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ – Vishwanews24

ಕಿಶೋರ್‌ ವೇಣೂರು ಪಾರ್ಶ್ವನಾಥ ಪ್ರಿಂಟರ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಂದೆ, ತಾಯಿ, ಮೂವರು ಸಹೋದರರು, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ

Leave a Reply