ಬೆಳ್ತಂಗಡಿ : ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ; ಶೌಚಾಲಯದೊಳಗೆ ಮೃತದೇಹ ಪತ್ತೆ -Vishwanews24
ಬೆಳ್ತಂಗಡಿ: ತನ್ನ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದು ಶೌಚಾಲಯದೊಳಗೆ ಮೃತದೇಹವನ್ನು ಹಾಕಿದ ಕೃತ್ಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಪತಿ ಮನೆಯಲ್ಲಿ ವಾಸವಿದ್ದ, ಮೂಲತಃ ಪುತ್ತೂರಿನ ನಿವಾಸಿ ತಸ್ಲಿಮಾ (23)ಕೊಲೆಯಾದ ಪತ್ನಿ. ತಸ್ಲಿಮಾಳ ಮೃತದೇಹ ಆಕೆಯ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿದ್ದು, ಪತಿ ಉಮರ್ ಫಾರೂಕ್ ನಾಪತ್ತೆಯಾಗಿದ್ದಾನೆ. ಈಗಾಲೇ ಎರಡು ಮದುವೆಯಾಗಿರುವ ಉಮರ್ ಫಾರೂಕ್ ಕಳೆದ ವರ್ಷ ತಸ್ಲಿಮಾಳನ್ನು ಮೂರನೇ ಮದುವೆಯಾಗಿದ್ದಾನೆ.
ಮೃತ ಮಹಿಳೆ ಬೆಳ್ತಂಗಡಿ ತಾಲೂಕು ಗೇರುಕಟ್ಟೆ ಉಮರ್ ಫಾರೂಕ್ ಎಂಬರೊಂದಿಗೆ ವಿವಾಹವಾಗಿದರು. ಈ ಜೋಡಿಗೆ 4 ವರ್ಷದ ಗಂಡು ಮಗು ಮತ್ತು 2 ವರ್ಷದ ಹೆಣ್ಣು ಮಗು ಸೇರಿ ಇಬ್ಬರು ಮಕ್ಕಳಿದ್ದಾರೆ.
ಮಹಿಳೆಯ ಮೃತ ದೇಹ ಶೌಚಾಲಯದಲ್ಲಿ ಪತ್ತೆಯಾಗಿದೆ. ಪ್ರತಿ ದಿನ ರಾತ್ರಿ ಮನೆಯಲ್ಲಿ ಜಗಳವಾಗುತ್ತಿದ್ದು ನಿನ್ನೆಯು ಜಗಳವಾಗುತ್ತಿತ್ತು ಎಂದು ಸ್ಥಳಿಯರು ತಿಳಿಸಿದ್ದಾರೆ.
ಈತನ ವಿರುದ್ದ ಪುಂಜಾಲಕಟ್ಟೆ, ವೇಣೂರು ಸೇರಿದಂತೆ ಬೇರೆ ಜಿಲ್ಲೆಯ ಪೋಲೀಸ್ ಠಾಣೆಯಲ್ಲೂ ಕೂಡ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಹಾಗೂ ಬೆಳ್ತಂಗಡಿ ಎಸ್.ಐ ನಂದಕುಮಾರ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
