ಬೆಳ್ತಂಗಡಿ ಪಾಕಿಸ್ತಾನ ಪರ ಘೋಷಣೆ : ಈ ವಿದ್ರೋಹಕ್ಕೆ ತಕ್ಕ ಶಾಸ್ತಿ ಮಾಡಿಯೇ ತೀರುತ್ತೇವೆ.. : ಶಾಸಕ ಹರೀಶ್ ಪೂಂಜ -Vishwanews24
ಬೆಳ್ತಂಗಡಿ ಪಾಕಿಸ್ತಾನದ ಪರ ಘೋಷಣೆ : ಈ ವಿದ್ರೋಹಕ್ಕೆ ತಕ್ಕ ಶಾಸ್ತಿ ಮಾಡಿಯೇ ತೀರುತ್ತೇವೆ.. : ಶಾಸಕ ಹರೀಶ್ ಪೂಂಜ -Vishwanews24
ಬೆಳ್ತಂಗಡಿ: ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆಯ ವೇಳ ಉಜಿರೆಯ ಮತ ಎಣಿಕಾ ಕೇಂದ್ರದ ಪಕ್ಕದಲ್ಲಿ ದೇಶದ್ರೋಹಿ ದುಷ್ಕರ್ಮಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ದ್ರೋಹಿಗಳ ವಿರುದ್ಧ ತಕ್ಕ ಶಾಸ್ತಿ ಮಾಡಿಯೇ ತೀರುತ್ತೇವೆ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆಯ ವೇಳೆ ಉಜಿರೆಯ ಮತ ಎಣಿಕಾ ಕೇಂದ್ರದ ಪಕ್ಕದಲ್ಲಿ ದೇಶದ್ರೋಹಿ ದುಷ್ಕರ್ಮಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಸ್.ಡಿ.ಪಿ.ಐ ಎಂಬ ವಿದ್ರೋಹಿ ಪಕ್ಷದ ಸುಮಾರು 10-15 ಜನ ಬೆಂಬಲಿಗರ ವಿರುದ್ದ ಪ್ರಕರಣ
ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆ ಕಾರ್ಯ ನಡೆಯುತ್ತಿದೆ. ಈ ವಿದ್ರೋಹಕ್ಕೆ ತಕ್ಕ ಶಾಸ್ತಿ ಮಾಡಿಯೇ ತೀರುತ್ತೇವೆ.. ಎಂದು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ


