ಬೆಳ್ತಂಗಡಿ: ಮತಎಣಿಕೆ ಕೇಂದ್ರದ ಹೊರಗಡೆ ಎಸ್ ಡಿಪಿಐ ಕಾರ್ಯಕರ್ತರಿಂದ ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ -Vishwanews24
ಬೆಳ್ತಂಗಡಿ: ಮತಎಣಿಕೆ ಕೇಂದ್ರದ ಹೊರಗಡೆ ಎಸ್ ಡಿಪಿಐ ಕಾರ್ಯಕರ್ತರಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ -Vishwanews24
ಬೆಳ್ತಂಗಡಿ: ಇಲ್ಲಿನ ಮತ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ಆಚರಿಸುತ್ತಿದ್ದ ಎಸ್ ಡಿಪಿಐ ಕಾರ್ಯಕರ್ತರು ಪಾಕಿಸ್ಥಾನ ಪರ ಘೋಷಣೆಗಳನ್ನು ಕೂಗಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮತ ಏಣಿಕೆ ಕೇಂದ್ರದ ಹೊರಗೆ ರಾಜಕೀಯ ಪಕ್ಷಗಳ ಸಾವಿರಾರು ಕಾರ್ಯಕರ್ತರು ಸೇರಿದ್ದರು. ಒಂದೊಂದೇ ಕ್ಷೇತ್ರದ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದರು.
ಬಿಜೆಪಿ ಕಾರ್ಯಕರ್ತರು ತಮ್ಮ ಬೆಂಬಲಿತ ಅಭ್ಯರ್ಥಿಗಳು ವಿಜಯಿಯಾದಾಗ ಪಕ್ಷದ ಘೋಷಣೆ ಕೂಗೂತ್ತಾ, ಬವುಟ ಹಾರಸಿ ವಿಜಯೋತ್ಸವದಲ್ಲಿ ತೊಡಗಿದ್ದರು. ಈ ವೇಳೆ ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗೂತ್ತಾ ಬಿಜೆಪಿ ಕಾರ್ಯಕರ್ತರ ಬಳಿ ಬಂದರು. ಎರಡೂ ಪಕ್ಷದ ಬೆಂಬಲಿಗರ ಘೋಷಣೆಗಳು ತಾರಕಕ್ಕೇರಿದಾಗ ಎಸ್ ಡಿಪಿಐ ಕಡೆಯಿಂದ “ಪಾಕಿಸ್ಥಾನ ಜಂದಾಬಾದ್” ಘೋಷಣೆ ಕೂಗಲಾಯಿತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿ ವೃತ್ತ ನಿರೀಕ್ಷಕ ಸಂದೇಶ್ ಪಿಜಿ ಗುಂಪು ಚದುರಿಸಿದರು. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮತ ಎಣಿಕೆ ಕೇಂದ್ರದ ಬಳಿ ವಿಜಯೋತ್ಸವ ಆಚರಿಸದಂತೆ ತಾಕೀತು ಮಾಡಿದ್ದಾರೆ.
