ಬೆಳ್ತಂಗಡಿ: ಸೌಜನ್ಯಾ ಪರ ಹೋರಾಟಗಾರ ಜಯಂತ್.ಟಿ ವಿರುದ್ಧ ಸುಮೊಟೊ ಪ್ರಕರಣ ದಾಖಲು – vishwanews24
ಬೆಳ್ತಂಗಡಿ: ಸೌಜನ್ಯಾ ಪರ ಹೋರಾಟಗಾರ ಜಯಂತ್.ಟಿ ವಿರುದ್ಧ ಸುಮೊಟೊ ಪ್ರಕರಣ ದಾಖಲು
ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಮಾಡಿದ ಪ್ರಕರಣದ ಸಂಬಂಧ ಸೌಜನ್ಯಾ ಪರ ಹೋರಾಟಗಾರ ಜಯಂತ್.ಟಿ ವಿಡಿಯೋ ಮೂಲಕ ಜನರಿಗೆ ತಪ್ಪು ಸಂದೇಶ ಪ್ರಸಾರ ಮಾಡಿದ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ಬೆಳ್ತಂಗಡಿ ಪೊಲೀಸರ ಮನವಿ ಮೇರೆಗೆ ಪುತ್ತೂರು ಎಸಿ ಸ್ಟೆಲ್ಲಾ ವರ್ಗಿಸ್ ಸೆ.18 ರಂದು ಒಂದು ವರ್ಷಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಈ ಗಡಿಪಾರು ಆದೇಶ ಮಾಡಿದ ಅಂಶಗಳು ಸರಿಯಾಗಿದೆ ಎಂದು ಗೊತ್ತಿದ್ದರು ಜನರನ್ನು ಪ್ರಚೋದಿಸಲು ಸುಳ್ಳು ಮಾಹಿತಿಗಳ ಮೂಲಕ ಬಂಟ್ವಾಳ ಡಿವೈಎಸ್ಪಿ ಮತ್ತು ಪುತ್ತೂರು ಎಸಿ ಬಗ್ಗೆ ಹೋರಾಟಗಾರ ಜಯಂತ್ ಟಿ ಎಂಬವರು ತಪ್ಪು ಸಂದೇಶಗಳನ್ನು ವಿಡಿಯೋ ಮಾಡಿ ಪ್ರಸಾರ ಮಾಡಿದ್ದಾರೆ.
ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ BNS-353(1)(ಚಿ) ಅಡಿಯಲ್ಲಿ ಜಯಂತ್ ಟಿ ವಿರುದ್ಧ ಅ.14 ರಂದು ಸುಮೊಟೊ ಪ್ರಕರಣ ದಾಖಲಾಗಿದೆ.
ನವೆಂಬರ್ ಮೊದಲ ವಾರ ಕಟಪಾಡಿ ಫ್ಲೈ-ಓವರ್ ಕಾಮಗಾರಿ ಆರಂಭ: ಸಂಸದ ಕೋಟ – vishwanews24
