ಬೆಳ್ಮಣ್‌: ಕ್ರೈಸ್ತ ಯುವಕನ ಅಯ್ಯಪ್ಪ ಭಕ್ತಿ ; 18ನೇ ಬಾರಿ ಶಬರಿಮಲೆ ಯಾತ್ರೆ – vishwanews24

Featured, ಉಡುಪಿ

ಬೆಳ್ಮಣ್‌: ಕ್ರೈಸ್ತ ಯುವಕನ ಅಯ್ಯಪ್ಪ ಭಕ್ತಿ ; 18ನೇ ಬಾರಿ ಶಬರಿಮಲೆ ಯಾತ್ರೆ

ಬೆಳ್ಮಣ್‌: ಜಾತಿ ಧರ್ಮ ಹೆಸರಲ್ಲಿ ಸಮಾಜದಲ್ಲಿ ಸಾಮರಸ್ಯ ಪ್ರತೀಕವಾಗಿ ಇಲ್ಲೊಂದು ವಿಶೇಷ ನಡೆದಿದೆ. ಕಾರ್ಕಳ ತಾಲೂಕಿನ ಸಂಕಲಕರಿಯ ಗೋಕುಲನಗರದ ಆಜಿತ್‌ ಸೆರಾವೋ ಎಂಬ ಕ್ರೈಸ್ತ ಯುವಕನೂ ಯಾತ್ರೆಗೆ ಮುಂದಾಗಿದ್ದಾನೆ.

ಉಡುಪಿ: ವಿವಿಧ ಹುದ್ದೆ – ಅರ್ಜಿ ಆಹ್ವಾನ – vishwanews24

 

ಇದು ಇವರ 18ನೇ ವರ್ಷದ ಯಾತ್ರೆ
ದಿ| ವಿಲಿಯಂ ಸೆರಾವೋ, ದುಲ್ಸಿನ್‌ ಸೆರಾವೋ ದಂಪತಿಯ ಅವಳಿ ಗಂಡು ಮಕ್ಕಳಲ್ಲಿ ಓರ್ವನಾದ ಅಜಿತ್‌ ನದ್ದು ಎಲೆಕ್ಟ್ರಿಕಲ್‌ ವೃತ್ತಿ. 18 ವರ್ಷಗಳ ಹಿಂದೆ ಪೊಳಲಿಯ ಗುರುಸ್ವಾಮಿಯೋರ್ವ ರಿಂದ ಪ್ರಭಾವಿತರಾಗಿ ಮಾಲೆ ಧರಿಸಿ ದರು. ಕೊರೊನಾ ಸಂದರ್ಭ ದಲ್ಲೂ ಅಯ್ಯಪ್ಪನ ದರ್ಶನ ತಪ್ಪಿಸಲಿಲ್ಲ. ಅಜಿತ್‌ ಹಿಂದಿನ 17 ವರ್ಷಗಳಲ್ಲಿ 5 ಬಾರಿ ದಟ್ಟ ಕಾನನ ದಾರಿಯಲ್ಲಿ ಸಾಗಿ ಅಯ್ಯಪ್ಪನ ದರ್ಶನ ಮಾಡಿದರು. ತಂದೆ ತೀರಿಕೊಂಡ ವರ್ಷ ಮಾಲೆ ಧರಿಸಿರಲಿಲ್ಲ.
ತನ್ನ ಈ ಪುಣ್ಯ ಕಾರ್ಯಕ್ಕೆ ಮನೆಯವರು, ನೆರೆಹೊರೆಯವರು ಸಹಿತ ಎಲ್ಲ ಧರ್ಮದವರ ಬೆಂಬಲವಿದೆ. ಅಯ್ಯಪ್ಪನ ಮೇಲಿನ ಅಚಲ ವಿಶ್ವಾಸ ನನ್ನದು.  ಎನ್ನುತ್ತಾರೆ ಅಜಿತ್‌ ಸೆರಾವೋ. ಮಕರ ಜ್ಯೋತಿಯಂದು ಅಜಿತ್‌ ಅಯ್ಯಪ್ಪನನ್ನು ಕಣ್ತುಂಬಿಕೊಳ್ಳುವರು.

ಮಂಗಳೂರು : ಬ್ರೇಕ್ ಫೇಲ್ ಆದ ಬಸ್ಸನ್ನು ನಿಯಂತ್ರಣಕ್ಕೆ ತಂದು ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ ಚಾಲಕ – vishwanews24

Leave a Reply