ಬೇರೆ ಪಕ್ಷದಿಂದ ಬಂದು ಇಲ್ಲಿ ಗುಂಪು ಕಟ್ಟಿ ಪಕ್ಷ ಹಾಳು ಮಾಡಬೇಡಿ : ಡಿ ಕೆ ಶಿವಕುಮಾರ್ -Vishwanews24
ಬೇರೆ ಪಕ್ಷದಿಂದ ಬಂದು ಇಲ್ಲಿ ಗುಂಪು ಕಟ್ಟಿ ಪಕ್ಷ ಹಾಳು ಮಾಡಬೇಡಿ…
ಗುಂಪುಗಾರಿಕೆ ಮಾಡುವವರು ನಮಗೆ ಬೇಡ…
ಪಕ್ಷವನ್ನು ಪೂಜಿಸಿ, ವ್ಯಕ್ತಿಯನ್ನಲ್ಲ ..
ಬೆಂಗಳೂರು: ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವಾಗಿ ಭಿನ್ನಾಭಿಪ್ರಾಯ ಎದ್ದಿದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರು ತಮ್ಮ ನಾಯಕನೇ ಮುಂದಿನ ಸಿಎಂ ಎಂದು ಹೇಳುತ್ತಿರುವುದು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತೆ ಆಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಇದೇ ವಿಚಾರವಾಗಿ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. “ಬೇರೆ ಪಕ್ಷದಿಂದ ಬಂದು ಇಲ್ಲಿ ಗುಂಪು ಕಟ್ಟಿ ಪಕ್ಷ ಹಾಳು ಮಾಡಬೇಡಿ. ಗುಂಪುಗಾರಿಕೆ ಮಾಡುವವರು ನಮಗೆ ಬೇಡ. ಪಕ್ಷವನ್ನು ಪೂಜಿಸಿ, ವ್ಯಕ್ತಿಯನ್ನಲ್ಲ” ಎಂದು ಹೇಳಿದ್ದಾರೆ. ಈ ಮೂಲಕ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ನಲ್ಲಿ ಮೂಲ- ವಲಸಿಗ ಚರ್ಚೆಗೂ ನಾಂದಿ ಹಾಡಿದ್ದಾರೆ.
