ಬೈಂದೂರು: ದೋಣಿ ದುರಂತ : ಮೃತ ಮೀನುಗಾರರ ಮನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ; ಪರಿಹಾರದ ಆದೇಶ ಪತ್ರ ಹಸ್ತಾಂತರ -Vishwanews24
ಬೈಂದೂರು: ದೋಣಿ ದುರಂತ : ಮೃತ ಮೀನುಗಾರರ ಮನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ; ಪರಿಹಾರದ ಆದೇಶ ಪತ್ರ ಹಸ್ತಾಂತರ -Vishwanews24
ಬೈಂದೂರು: ಕೊಡೇರಿ ದೋಣಿ ದುರಂತದಲ್ಲಿ ಮೃತರಾದ ನಾಲ್ವರು ಮೀನುಗಾರರ ಮನೆಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಸ್ಥಳೀಯ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರೊಂದಿಗೆ ಭೇಟಿ ನೀಡಿದ ಸಚಿವರು, ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ತಲಾ ರೂ. 6 ಲಕ್ಷ ಮೊತ್ತದ ಆದೇಶ ಪ್ರತಿಯನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.
ಮೀನುಗಾರರ ಜೊತೆ ಸರಕಾರ ಇದೆ ಎಂದು ಭರವಸೆ ನೀಡಿದ ಸಚಿವರು, ಮೃತ ಕುಟುಂಬದ ಸದಸ್ಯರ ಜೊತೆ ಕೆಲಕಾಲ ಮಾತುಕತೆ ನಡೆಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜನಪ್ರತಿನಿಧಿಗಳು,ಅಧಿಕಾರಿಗಳು ಉಪಸ್ಥಿತರಿದ್ದರು.