ಬೈಂದೂರು: ವಿವಾಹಿತ ಮಹಿಳೆ ಅನ್ಯಧರ್ಮದ ಯುವಕನೊಂದಿಗೆ ಪರಾರಿ – Vishwanews24

Featured, ಉಡುಪಿ

ಬೈಂದೂರು: ವಿವಾಹಿತ ಮಹಿಳೆ ಅನ್ಯಧರ್ಮದ ಯುವಕನೊಂದಿಗೆ ಪರಾರಿ

ಬೈಂದೂರು: ಪುತ್ತೂರಿನ ವಿವಾಹಿತ ಮಹಿಳೆಯೊಬ್ಬರು ಅನ್ಯಧರ್ಮದ ಯುವಕನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಪ್ರಶ್ನಿಸಲು ತೆರಳಿದ್ದ ವೇಳೆ ಮಹಿಳೆಯ ಪತಿಗೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ. ಇದು ಲವ್‌ಜಿಹಾದ್‌ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ.

ಪುತ್ತೂರು ಕೆಮ್ಮಾಯಿ ನಿವಾಸಿ ಸುರೇಶ್‌ ಭಟ್‌ ಅವರ ಪತ್ನಿ ಪ್ರತಿಮಾ ಭಟ್‌ ಅವರು ಪುತ್ತೂರಿನ ಕುರಿಯ ಬಳ್ಳಮಜಲು ನಿವಾಸಿ ಪುತ್ತೂರಿನಲ್ಲಿ ಆ್ಯಂಬುಲೆನ್ಸ್‌ ಚಾಲಕ ಸಿರಾಜುದ್ದೀನ್‌ ಜತೆ ಪರಾರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ. ಪುತ್ತೂರಿನ ಸಿಜು ಅಲಿಯಾಸ್‌ ಸಿರಾಜುದ್ದೀನ್‌ ಯಾನೆ ಬೈಂದೂರಿನ ಸೂರಜ್‌ ಪ್ರಕರಣದ ಪ್ರಮುಖ ಆರೋಪಿ.

ಈ ಬಗ್ಗೆ ಮಾಹಿತಿ ಪಡೆದ ಮಹಿಳೆ ಪ್ರತಿಮಾ ಭಟ್‌ ಅವರ ಪತಿ ಸುರೇಶ್‌ ಭಟ್‌ ಪತ್ನಿಯನ್ನು ಪ್ರಶ್ನಿಸಲು ತೆರಳಿದ್ದ ವೇಳೆ ಮೇಲೆ ಅನ್ಯಕೋಮಿನ ಯುವಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೈದು ಬೆದರಿಕೆಯೊಡ್ಡಿದ ಘಟನೆ ಬೈಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆಯೂ ದೂರು ದಾಖಲಾಗಿದೆ.

Leave a Reply