ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಫೋನ್ ಕರೆ ; ಓಟಿಪಿ ಹೇಳಿ 40,998 ರೂ. ಕಳೆದುಕೊಂಡ ಸುಳ್ಯದ ವ್ಯಕ್ತಿ -Vishwanews24

Featured, ದಕ್ಷಿಣ ಕನ್ನಡ

ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಫೋನ್ ಕರೆ ; ಓಟಿಪಿ ಹೇಳಿ 40,998 ರೂ. ಕಳೆದುಕೊಂಡ ಸುಳ್ಯದ ವ್ಯಕ್ತಿ -Vishwanews24

ಸುಳ್ಯ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಓಟಿಪಿ ಪಡೆದು ವ್ಯಕ್ತಿಯೊಬ್ಬರಿಗೆ 40 ಸಾವಿರ ರೂ. ವಂಚಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಾಲ್ಸೂರಿನಲ್ಲಿ ನಡೆದಿದೆ.

ಸುಳ್ಯ ಕೆನರಾ ಬ್ಯಾಂಕಿನ ಮ್ಯಾನೇಜರ್ ಮಾತನಾಡುತ್ತಿದ್ದೇನೆ ಎಂದು ದೂರವಾಣಿ ಮುಖೇನ ಕರೆ ಮಾಡಿ ನಂಬಿಸಿ ನಿಮ್ಮ ದೂರವಾಣಿ ಸಂಖ್ಯೆಗೆ ಒಂದು ಓಟಿಪಿ ನಂಬರ್ ಬರಲಿದ್ದು ಅದನ್ನು ಕೂಡಲೇ ನನಗೆ ನೀಡಬೇಕೆಂದು ತಿಳಿಸಿದ್ದಾನೆ ಎನ್ನಲಾಗಿದೆ.

ಇವರ ದೂರವಾಣಿ ಸಂಖ್ಯೆಗೆ ಓಟಿಪಿ ನಂಬರ್ ಬಂದಿದದ್ದು ಅದನ್ನು ಅವರು ಕರೆ ಮಾಡಿದ ವ್ಯಕ್ತಿಗೆ ನೀಡಿದ್ದಾರೆ. ಪ್ರಥಮ ಬಾರಿಗೆ 30000 ರೂಪಾಯಿ, ಎರಡನೆಯ ಬಾರಿಗೆ 9999 ರೂ, ಮೂರನೆಯ ಬಾರಿಗೆ 999 ರೂ ಸೇರಿದಂತೆ ಒಟ್ಟು 40,998 ರೂಪಾಯಿಯನ್ನು ಈ ವ್ಯಕ್ತಿ ಕಳೆದುಕೊಂಡಿದ್ದಾರೆ. ತಾನು ಮೋಸ ಹೋಗಿದ್ದೇನೆಂದು ಅರಿತ ಅವರು ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ‌.

ಕೇಂದ್ರ ಸರ್ಕಾರದ ಲಸಿಕೆ ತಂತ್ರವು ನೋಟ್‌ ಬ್ಯಾನ್‌ಗಿಂತ ಕಡಿಮೆಯೇನಿಲ್ಲ : ರಾಹುಲ್‌ ಗಾಂಧಿ -Vishwanews24