ಬ್ಯಾಂಕ್ ಗ್ರಾಹಕರ ಗಮನಕ್ಕೆ: ಸೆ.26ರಿಂದ ಸತತ ನಾಲ್ಕು ದಿನ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ -Vishwanews24
ಬೆಂಗಳೂರು: ಸೆ.26ರಿಂದ ಸತತ ನಾಲ್ಕು ದಿನ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ.
ಸಾರ್ವಜನಿಕ ವಲಯದ 10 ಬ್ಯಾಂಕ್ಗಳ ವಿಲೀನ ವಿರೋಧಿಸಿ ಬ್ಯಾಂಕ್ ನೌಕರರ ನಾಲ್ಕು ಯೂನಿಯನ್ಗಳು ಸೆ.26 ಮತ್ತು 27ರಂದು ಮುಷ್ಕರಕ್ಕೆ ಕರೆ ನೀಡಿವೆ.
ಈ ಎರಡು ದಿನಗಳ ಮುಷ್ಕರದ ಬೆನ್ನಿಗೇ ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆ ಬರಲಿದೆ. ಸೆ.30ರಂದು ಬ್ಯಾಂಕ್ಗಳ ಅರ್ಧವಾರ್ಷಿಕ ಲೆಕ್ಕ ಚುಕ್ತಾ ದಿನ. ಹೀಗಾಗಿ ಅಂದು ಬ್ಯಾಂಕ್ಗಳ ಬಾಗಿಲು ತೆರೆದಿದ್ದರೂ ಗ್ರಾಹಕರಿಗೆ ಸೇವೆ ದೊರೆಯದು.
ಸತತ ಐದು ದಿನ ಬ್ಯಾಂಕ್ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಚೆಕ್ಗಳ ತೀರುವಳಿ, ಹಣ ಸಂದಾಯ, ಹಣ ಹಿಂಪಡೆಯುವುದು, ಡಿಡಿ ವ್ಯವಹಾರ ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಕಂಡುಬರಲಿದೆ. ಬ್ಯಾಂಕ್ಗಳ ಎಟಿಎಂಗಳಲ್ಲೂ ಹಣ ಸಿಗುವುದು ಕಷ್ಟ.
