ಬ್ರಹ್ಮಾವರ: ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವು – Vishwanews24

Featured, ಉಡುಪಿ

ಬ್ರಹ್ಮಾವರ: ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವು

ಬ್ರಹ್ಮಾವರ: ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ಕೂರು ಹೊಸಾಳ ಸಮೀಪದ ಸೀತಾ ನದಿಯಲ್ಲಿ ಸಂಭವಿಸಿದೆ.

ಹೊಸಾಳ ನಿವಾಸಿಗಳಾದ ಪ್ರಶಾಂತ (35) ಹಾಗೂ ಶ್ರೀಶಾ(21) ಸಾವನ್ನಪ್ಪಿದ ದುರ್ದೈವಿಗಳು.

ವಾಷಿಂಗ್ಟನ್: ಸರಕು ಹಡಗು ಡಿಕ್ಕಿ ಹೊಡೆದು ಕುಸಿದು ಬಿದ್ದ ಸೇತುವೆ – Vishwanews24

ಮಂಗಳವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಪ್ರಶಾಂತ್ ಹಾಗೂ ಶ್ರೀಶಾ ಮನೆ ಸಮೀಪದ‌ ಕೂಗಳತೆ ದೂರದ ಸೀತಾ ನದಿಗೆ ಮೀನು ಹಿಡಿಯಲು ತೆರಳಿದ್ದರು. ಮೀನಿಗಾಗಿ ಬಲೆ‌ ಹಾಕುತ್ತಿರುವ‌ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಸಮೀಪದಲ್ಲೇ‌ ಬಟ್ಟೆ ತೊಳೆಯುತ್ತಿದ್ದ ಮಹಿಳೆ ಗಮನಿಸಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳೀಯರು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ಈರ್ವರು ಸಾವನ್ನಪ್ಪಿದ್ದಾರೆ.

ಮೂಡುಬಿದಿರೆ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಇನ್ನೂ ಬಂಧನವಾಗದ ಆರೋಪಿ ಶಿಕ್ಷಕ ; ಗ್ರಾಮಸ್ಥರ ಅಸಮಾಧಾನ – Vishwanews24

ಬ್ರಹ್ಮಾವರ ಠಾಣಾಧಿಕಾರಿ ಮಧು ಪಿ.ಎಸ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Leave a Reply