ಬ್ರಹ್ಮಾವರ: ಹೂಡಿಕೆ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ – vishwanews24
ಬ್ರಹ್ಮಾವರ: ಹೂಡಿಕೆ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ
ಬ್ರಹ್ಮಾವರ: ಹೂಡಿಕೆ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮ್ರಗೋಡು ಗ್ರಾಮದ ಅರುಣಾ ಆಚಾರ್ಯ(30) ಹಣ ಕಳೆದುಕೊಂಡವರು. ಇವರ ಇನ್ ಸ್ಟಾಗ್ರಾಮ್ ಖಾತೆಗೆ 2024ರ ಜು.22ರಂದು ಕಂಪೆನಿಯೊಂದರ ಹೆಸರಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಜಾಹಿರಾತು ಬಂದಿದ್ದು ಈ ಬಗ್ಗೆ ಅರುಣಾ ಆಸಕ್ತಿ ಹೊಂದಿ ಆರೋಪಿಯು ನೀಡಿದ್ದ ಮೊಬೈಲ್ ಸಂಖ್ಯೆ ಸಂಪರ್ಕಿಸಿದಾಗ ಆರೋಪಿಯು ವಾಟ್ಸಾಪ್ ಮೂಲಕ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಬಗ್ಗೆ ತರಬೇತಿ ನೀಡಿದ್ದ.
ಡಿ.26 ರಿಂದ 28ರ ವರೆಗೆ “ಕಾಪು ಕಡಲ ಪರ್ಬ” : ಆಮಂತ್ರಣ ಪತ್ರಿಕೆ ಬಿಡುಗಡೆ – vishwanews24
ಮೊದ ಮೊದಲು ಅರುಣಾ ಹೂಡಿಕೆ ಮಾಡಿದ ಹಣಕ್ಕೆ ಅಧಿಕ ಲಾಭವನ್ನು ನೀಡಿದ್ದು, ಇದನ್ನು ನಂಬಿ ಅರುಣಾ 2024ರ ಸೆಪ್ಟೆಂಬರ್‌ನಿಂದ 2024ರ ಡಿ.19ರವರೆಗೆ ತನ್ನ ಖಾತೆಗಳಿಂದ ಆರೋಪಿಗಳ ಖಾತೆಗೆ ಹಂತಹಂತವಾಗಿ ಒಟ್ಟು 15,95,005.90ರೂ. ಹಣವನ್ನು ವರ್ಗಾವಣೆ ಮಾಡಿ ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ಈ ಹಣವನ್ನು ಈವರೆಗೆ ವಾಪಾಸ್ಸು ನೀಡದೇ ವಂಚಿಸಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಉಡುಪಿ: ಡಿ.25, ಡಿ.27ರಂದು ಬಿಜೆಪಿಯಿಂದ ’ಅಟಲ್ ಸ್ಮರಣೆ’: ಕುತ್ಯಾರು ನವೀನ್ ಶೆಟ್ಟಿ – vishwanews24
