ಬ್ರಾಹ್ಮಣರು ಅರ್ಹರಾಗಿದ್ದು, ಸಮಾಜಮುಖಿಗಳಾಗಿದ್ದರೆ ಸಿ.ಎಂ ಆಗಲು  ಯಾವುದೇ ಅಡ್ಡಿಯಿಲ್ಲ : ಸುಬುಧೇಂದ್ರತೀರ್ಥ ಸ್ವಾಮೀಜಿ – Vishwanews24

Featured, ರಾಜ್ಯ ನ್ಯೂಸ್

ಬ್ರಾಹ್ಮಣರು ಅರ್ಹರಾಗಿದ್ದು, ಸಮಾಜಮುಖಿಗಳಾಗಿದ್ದರೆ ಸಿ.ಎಂ ಆಗಲು  ಯಾವುದೇ ಅಡ್ಡಿಯಿಲ್ಲ : ಸುಬುಧೇಂದ್ರತೀರ್ಥ ಸ್ವಾಮೀಜಿ

ಬಾಗಲಕೋಟೆ: ‘ಬ್ರಾಹ್ಮಣರು ಅರ್ಹರಾಗಿದ್ದು, ಸಮಾಜಮುಖಿಗಳಾಗಿದ್ದರೆ ಮುಖ್ಯಮಂತ್ರಿಯಾಗಲು ಯಾವುದೇ ಅಡ್ಡಿಯಿಲ್ಲ’ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ಮಂಗಳವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ,‘ಬ್ರಾಹ್ಮಣರು ಬೇರೆ ಸಮಾಜದ ವಿರೋಧಿಯಲ್ಲ. ಎಲ್ಲರ ಕ್ಷೇಮ ಕೋರುವ ಸಮಾಜ’ ಎಂದು ಹೇಳಿದರು.

ಈ ಬಾರಿ ವಿಧಾನಸಭೆ ಚುನಾವಣೆ ಸಾರ್ವಕರ್ ಹಾಗೂ ಟಿಪ್ಪು ಸಿದ್ಧಾಂತಗಳ ನಡುವೆ : ನಳಿನ್‌ ಕುಮಾರ್‌ ಕಟೀಲ್ – Vishwanews24

‘ಬ್ರಾಹ್ಮಣ ಸಮುದಾಯವನ್ನು ಯಾರೇ ನಿಂದಿಸಿದರೂ ಖಂಡಿಸುತ್ತೇವೆ. ಯಾರೂ, ಯಾವ ಸಮುದಾಯವನ್ನೂ ತೆಗಳಬಾರದು. ಒಂದು ಸಮುದಾಯದವರು ಯಾವುದೇ ಮುಖ್ಯ ಪದವಿ ಅಲಂಕರಿಸಬಾರದು ಎಂಬ ಹೇಳಿಕೆ ಸಂವಿಧಾನ ವಿರೋಧಿ. ಅದು ಪ್ರಜಾಪ್ರಭುತ್ವ ಆಗಲ್ಲ;ನಿರಂಕುಶ ಪ್ರಭುತ್ವ’ ಎಂದರು.

ಹನಿ ನೀರಾವರಿ ಸಹಾಯಧನಕ್ಕೆ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನ – Vishwanews24

‘ಹಿಂದುತ್ವ ವಿರೋಧಿಸುವುದು ಅರ್ಥಹೀನ. ಸಿದ್ದರಾಮಯ್ಯ ಅವರು ತಾವು ಹಿಂದೂ ಎನ್ನುತ್ತಾರೆ. ಆದರೆ, ಹಿಂದುತ್ವ ಒಪ್ಪುವುದಿಲ್ಲ. ತಾಯಿ ಅನ್ನೋದು, ನಂತರ ಟೀಕಿಸುವುದು ಅಪಹಾಸ್ಯ’ ಎಂದು ಹೇಳಿದರು.

Leave a Reply