ಬ್ರೇಕ್ ಲೈಟ್,ಇಂಡಿಕೇಟರ್,ಇಲ್ಲದ ಬಸ್ಸುಗಳಿಗೆ ದಂಡ ಹಾಕಲು ಪೋಲಿಸರು ಯಾಕೆ ಹಿಂದೇಟು…?
ಬ್ರೇಕ್ ಲೈಟ್,ಇಂಡಿಕೇಟರ್,ಇಲ್ಲದ ಬಸ್ಸುಗಳಿಗೆ ದಂಡ ಹಾಕಲು ಪೋಲಿಸರು ಯಾಕೆ ಹಿಂದೇಟು…?
ಉಡುಪಿ: ದಿನಕ್ಕೆ ಸಾವಿರಾರು ಪ್ರಯಾಣಿಕರನ್ನ ಹೊತ್ತುಯ್ಯುವ ಸಿಟಿ,ಸರ್ವಿಸ್ ಬಸ್ಸುಗಳ ಅವ್ಯವಸ್ಥೆ ದೇವರೆ ಬಲ್ಲ.
ಸರಿಯಾದ ಇಂಡೀಕೆಟರ್ ಇಲ್ಲ,ಬ್ರೇಕ್ ಲೈಟ್ ಇಲ್ಲದ ಹತ್ತಾರು ಬಸ್ಸುಗಳು ಪೋಲಿಸರ ಕಣ್ಣಮುಂದೆ ತಿರುಗಾಡ್ತ ಇದ್ದರೂ ಅದನ್ನ ನಿಲ್ಲಿಸಿ ಕಾನೂನು ಕ್ರಮಕೈಗೊಳ್ಳದಿರುವುದು ಮಾತ್ರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಅದೆಷ್ಟೋ ದ್ವಿಚಕ್ರ ,ಕಾರು ಸವಾರರು ಬಸ್ಸು ಲಾರಿಗಳ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಪ್ರಾಣ ಕಳೆದು ಕೊಂಡಿರುವುದು ಒಂದನೆಯದಾಗಿ ಹಠತ್ತನೆ ಹಾಕುವ ಬ್ರೇಕ್, ಮತ್ತು ಸರಿಯಾದ ಸಿಗ್ನಲ್ ನೀಡುವ ಇಂಡಿಕೇಟರ್ ಅಥಾವ ಬ್ರೇಕ್ ಲೈಟುಗಳು ಇಲ್ಲದಿರುವುದು.
ಈ ಬಗ್ಗೆ ಪೋಲಿಸರು ಹೆಚ್ಚಿನ ಮುತುವರ್ಜಿ ಕ್ರಮ ಕೈಗೊಂಡರೆ ಅದೆಷ್ಟೋ ಜೀವಗಳು ಬಲಿಯಾಗುವುದು ನಿಲ್ಲ ಬಹುದು.
ಈ ಎಲ್ಲಾ ಬಿಡಿಭಾಗಗಳು ಇಲ್ಲದೆ RTO ಅಧಿಕಾರಿಗಳು ಹೇಗೆ ವಾಹನ ತಪಾಸಣೆ ನಡೆಸಿ ಪಾಸ್ ಮಾಡುತ್ತಾರೋ ಎಂಬುದು ದೇವರೆ ಬಲ್ಲ.
ಬೈಕ್ ಗಳಲ್ಲಿ ಕನ್ನಡಿ ಇಲ್ಲ,ಇಂಡಿಕೇಟರ್ ಇಲ್ಲ,ನಂಬರ್ ಪ್ಲೇಟ್ ಇಲ್ಲ ಅಂತಾ ದಂಡ ಹಾಕುವ ಹಾಗೇ ಸರಿಯಾದ ವ್ಯವಸ್ಥೆ ಇಲ್ಲದ ಲಾರಿ,ಟಿಪ್ಪರ್, ಬಸ್ಸುಗಳ ಬಗ್ಗೆಯೂ ಕಾನೂನು ಕ್ರಮ ಜರಗಿಸಬೇಕೆಂಬುದು ಜನರ ಆಗ್ರಹವಾಗಿದೆ.
