ಭಟ್ಕಳ: ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನ ಮುಗಿಸಿದ ಹಿರಿಯ ಮಗಳು – Vishwanews24

Featured, ಉಡುಪಿ

ಭಟ್ಕಳ: ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನ ಮುಗಿಸಿದ ಹಿರಿಯ ಮಗಳು

ಭಟ್ಕಳ (ಉತ್ತರ ಕನ್ನಡ): ಗಂಡು ಮಕ್ಕಳಿಲ್ಲದ ತಂದೆಯ ಅಂತ್ಯಕ್ರಿಯೆಯನ್ನು ಹಿರಿಯ ಮಗಳೇ ನೆರವೇರಿಸಿದ ಘಟನೆ ಭಟ್ಕಳ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ನಡೆದಿದೆ. ಮಂಜುನಾಥ ನಾಯ್ (51) ಎಂಬುವವರು ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ನಿನ್ನೆ ಗೃಹಪ್ರವೇಶ ಮುಗಿಸಿ ಇಂದು ಮನೆ ಬಳಿಯ ಮರಕ್ಕೆ ಲುಂಗಿ ಕಟ್ಟಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿರಲಿಲ್ಲ. ಹೀಗಾಗಿ ಮೂವರ ಪೈಕಿ ಹಿರಿಯ ಮಗಳು ಶ್ವೇತಾ, ತಂದೆಯ ಅಂತ್ಯಕ್ರಿಯೆ ನಡೆಸಿದ್ದಾರೆ.

🌀 ನಿರ್ಧಾರಗಳಲ್ಲಿ ಆತ್ಮವಿಶ್ವಾಸವಿರಲಿ.. ⏺️ ನೋಡಿ ಇಂದಿನ ದಿನ ಭವಿಷ್ಯ -Vishwanews24

ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನ ಮುಗಿಸಿದ್ದಾಳೆ: ಗಂಡು ಮಕ್ಕಳೇ ಅಂತಿಮ ಸಂಸ್ಕಾರ ಮಾಡಬೇಕೆಂಬ ಸಂಪುದಾಯವನ್ನು ಮುರಿದು ಶ್ವೇತಾ ನೋವಲ್ಲೂ ದಿಟ್ಟತನ ಮೆರೆದಿದ್ದಾಳೆ.

Leave a Reply