ಭಯೋತ್ಪಾದಕರ ನಿಗ್ರಹಕ್ಕೆ ನಮ್ಮ ಯೋಧರು ಪರಿಪೂರ್ಣ ಸಿದ್ದರಾಗಿದ್ದಾರೆ. ಯಾವುದೇ ಪರಿಸ್ಥಿತಿ ನಿಭಾಯಿಸಲು ನಾವು ಸಮರ್ಥರಾಗಿದ್ದೇವೆ : ರಾಜನಾಥ್ ಸಿಂಗ್ -Vishwanews24
ಚೆನ್ನೈ, :-ಭಯೋತ್ಪಾದಕರ ನಿಗ್ರಹಕ್ಕೆ ನಮ್ಮ ಯೋಧರು ಪರಿಪೂರ್ಣ ಸಿದ್ದರಾಗಿದ್ದಾರೆ. ಯಾವುದೇ ಪರಿಸ್ಥಿತಿ ನಿಭಾಯಿಸಲು ನಾವು ಸಮರ್ಥರಾಗಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನ ಬೆಂಬಲಿತ ಉಗ್ರರ ನಿಗ್ರಹಕ್ಕೆ ಭಾರತೀಯ ಭದ್ರತಾ ಪಡೆಗಳು ಸಂಪೂರ್ಣ ಸನ್ನದ್ಧರಾಗಿದ್ದಾರೆ ಎಂದರು.
ಪಾಕಿಸ್ತಾನದ ಬಾಲಾಕೋಟ್‍ನಲ್ಲಿ ಉಗ್ರಗಾಮಿಗಳು ಅಡಗುದಾಣ ಮತ್ತು ಶಿಬಿರಗಳು ಮತ್ತೆ ಸಕ್ರಿಯವಾಗಿವೆ ಎಂಬ ಭೂ ಸೇನೆ ಮುಖ್ಯಸ್ಥರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರ ಯಾವುದೇ ಸನ್ನಿವೇಶ ಎದುರಿಲು ನಮ್ಮ ಯೋಧರು ಸರ್ವರೀತಿಯಲ್ಲಿಯೂ ಸಜ್ಜಾಗಿದ್ದಾರೆ ಎಂದು ಹೇಳಿದರು.
ಚೆನ್ನೈ ಪೋರ್ಟ್ ಟ್ರಸ್ಟ್‍ನಲ್ಲಿ ಇಂದು ಕರಾವಳಿ ರಕ್ಷಣಾ ಪಡೆಯ ಪಹರೆ ನೌಕೆ ವರಾಹವನ್ನು ಸೇನೆಗೆ ಸಮರ್ಪಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಚಿಂತೆ ಬೇಡ. ಭಯೋತ್ಪಾದಕರ ನಿಗ್ರಹಕ್ಕೆ ನಮ್ಮ ಯೋಧರು ಪರಿಪೂರ್ಣ ಸಿದ್ದರಾಗಿದ್ದಾರೆ. ಯಾವುದೇ ಪರಿಸ್ಥಿತಿ
ನಿಭಾಯಿಸಲು ನಾವು ಸಮರ್ಥರಾಗಿದ್ದೇವೆ ಎಂದು ಸಿಂಗ್ ತಿಳಿಸಿದರು.
ಬಹು ಉದ್ದೇಶಗಳ ವರಾಹದಿಂದ ನೌಕಾ ಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳ ಸಾಮಥ್ರ್ಯ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
