ಭವಿಷ್ಯದಲ್ಲಿ ರಾಹುಲ್ ಗಾಂಧಿ ದೇಶದ ಚಿತ್ರಣವನ್ನು ಬದಲಾಯಿಸುತ್ತಾರೆ : ನವಜೋತ್ ಸಿಂಗ್ ಸಿಧು – Vishwanews24
ಭವಿಷ್ಯದಲ್ಲಿ ರಾಹುಲ್ ಗಾಂಧಿ ದೇಶದ ಚಿತ್ರಣವನ್ನು ಬದಲಾಯಿಸುತ್ತಾರೆ : ನವಜೋತ್ ಸಿಂಗ್ ಸಿಧು – Vishwanews24
ಪಂಜಾಬ್ : ಪಂಚರಾಜ್ಯಗಳ ಚುನಾವಣಾ ತಯಾರಿಯ ವೇಳೆ ವಿದೇಶ ಪ್ರವಾಸಕ್ಕೆ ತೆರಳಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಏಕೆ ಟೀಕಿಸಬೇಕು? ಪಂಜಾಬ್ನಲ್ಲಿ ಅವರ ನೇತೃತ್ವದಲ್ಲೇ ಕಾಂಗ್ರೆಸ್ 76 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ನ 8 ಸಂಸದರು ಸಹ ಇದ್ದಾರೆ. ಯಾವಾಗ ಬೇಕಾದರೂ ರಾಹುಲ್ ಗಾಂಧಿ ಪಂಜಾಬ್ಗೆ ಬರಲು ಸ್ವತಂತ್ರರು” ಎಂದಿದ್ಧಾರೆ.
ಮುಂಬೈ ಕೊರೊನಾ ಹೆಚ್ಚಳ : 1ರಿಂದ 9ನೇ ತರಗತಿವರೆಗೆ ಜ. 31ರ ವರೆಗೆ ಶಾಲೆಗಳಿಗೆ ರಜೆ ಘೋಷಣೆ – Vishwanews24
“ಗಾಂಧಿ ಕುಟುಂಬ ಯಾವುದೇ ರಾಜ್ಯದ ಅಧಿಕಾರದಲ್ಲಿ ಅನಗತ್ಯವಾಗಿ ಮೂಗು ತೂರಿಸುವುದಕ್ಕೆ ಹೋಗುವುದಿಲ್ಲ. ಗಾಂಧಿ ಕುಟುಂಬ ಸುಸಂಸ್ಕೃತ ಕುಟುಂಬವಾಗಿದೆ. ಅವರು ಪಂಜಾಬ್ ರಾಜಕೀಯದಲ್ಲೂ ಸಹ ಹಸ್ತಕ್ಷೇಪ ಮಾಡಿಲ್ಲ. ಭವಿಷ್ಯದಲ್ಲಿ ರಾಹುಲ್ ಗಾಂಧಿ ದೇಶದ ಚಿತ್ರಣವನ್ನು ಬದಲಾಯಿಸುತ್ತಾರೆ” ಎಂದು ಹೊಗಳಿದ್ದಾರೆ.
ಕಾಂಗ್ರೆಸ್ನ ಒಳಜಗಳ ಹಾಗೂ ರಾಹುಲ್ ಗಾಂಧಿ ಪ್ರವಾಸದ ನಡುವೆಯೇ ಬಿಜೆಪಿ ತನ್ನ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಜನವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಪ್ರಚಾರ ಸಭೆ ನಡೆಸಲಿದ್ದಾರೆ.
ಮಕ್ಕಳ ಕೊರೊನಾ ಲಸಿಕಾಕರಣ ಅಭಿಯಾನ : ಭಾರತದಲ್ಲಿ ಮೊದಲ ದಿನ 40 ಲಕ್ಷ ಮಕ್ಕಳಿಗೆ ಕೊರೊನಾ ಲಸಿಕೆ – Vishwanews24
