ಭಾರತಕ್ಕೂ ಕಾಲಿಟ್ಟ ಮಂಕಿಪಾಕ್ಸ್  : ಕೇರಳದಲ್ಲಿ ಮೊದಲ ಪ್ರಕರಣ ದಾಖಲು- Vishwanews24

Featured, ರಾಷ್ಟ್ರ ನ್ಯೂಸ್

ಭಾರತಕ್ಕೂ ಕಾಲಿಟ್ಟ ಮಂಕಿಪಾಕ್ಸ್  : ಕೇರಳದಲ್ಲಿ ಮೊದಲ ಪ್ರಕರಣ ದಾಖಲು

ನವದೆಹಲಿ: ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುತ್ತಿದ್ದ ಮಂಕಿಪಾಕ್ಸ್‌ ವೈರಸ್‌ನ ಮೊದಲ ಪ್ರಕರಣ ಭಾರತದಲ್ಲಿ ವರದಿಯಾಗಿದೆ. ಕೇರಳದ ಒಬ್ಬ ವ್ಯಕ್ತಿಗೆ  ಮಂಕಿಪಾಕ್ಸ್ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೆಲ ದಿನಗಳ ಹಿಂದೆ ಯುಎಇಯಿಂದ ಆಗಮಿಸಿದ್ದ 35 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದೂ ತಿಳಿಸಿದ್ದಾರೆ.

ಅವರ ಪೋಷಕರು, ವಿಮಾನದಲ್ಲಿ ಸಮೀಪ ಕುಳಿತಿದ್ದ 11 ಮಂದಿ ಪ್ರಯಾಣಿಕರು, ಕ್ಯಾಬ್ ಮತ್ತು ಆಟೊ ಡ್ರೈವರ್‌ಗಳು, ಚಿಕಿತ್ಸೆ ನೀಡಿದ್ದ ಕೊಲ್ಲಂನ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ  ಎಲ್ಲ ಪ್ರಾಥಮಿಕ ಸಂಪರ್ಕಿತರನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಮಂಕಿಪಾಕ್ಸ್ ರೋಗ ಉಲ್ಬಣದ ಅವಧಿ 21 ದಿನಗಳಾಗಿವೆ.

ಉಡುಪಿಗೆ 100 ಹಾಸಿಗೆ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆ ಮಂಜೂರು – Vishwanews24

ತಮ್ಮ ಸ್ನೇಹಿತರೊಬ್ಬರಿಗೂ ಸೋಂಕು ಹರಡಿರುವ ಬಗ್ಗೆ ಸೋಂಕಿತ ವ್ಯಕ್ತಿ ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ. ಯುಎಇಯಿಂದ ಬರುವಾರ ದೇಹವನ್ನು ಸಂಪೂರ್ಣ ಕವರ್ ಮಾಡಿಕೊಂಡಿದ್ದ ರೋಗಿಯು ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳು ಕಂಡುಬಂದ ಬಳಿಕ, ಆತನ ಮಾದರಿಯನ್ನು ರಾಷ್ಟ್ರೀಯ ವೈರಾಣು ಸಂಸ್ತೆಗೆ ಕಳುಹಿಸಲಾಗಿತ್ತು. ಗುರುವಾರ ಸಂಜೆ ಅದರ ವರದಿ ಬಂದಿದ್ದು, ವ್ಯಕ್ತಿಗೆ ಮಂಕಿಪಾಕ್ಸ್ ತಗುಲಿರುವುದು ದೃಢಪಟ್ಟಿದೆ.

 

Leave a Reply