ಭಾರತಕ್ಕೆ ಮೋದಿಯಿಂದ ವಿಶ್ವ ಗೌರವ ; ಅವರು ಮತ್ತೆ ಪ್ರಧಾನಿಯಾಗುತ್ತಾರೆ – ಅಮೇರಿಕನ್ ಸಂಶೋಧಕ ಡೇವಿಡ್ ಫ್ರಾವ್ಲೇ
ಉಡುಪಿ: ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ. ಮೋದಿ 2019 ರಲ್ಲಿ ಮತ್ತೆ ಅಧಿಕಾರ ಹಿಡಿಯುತ್ತಾರೆ ಅಂತ ಅಮೇರಿಕಾದ ಹಿಂದೂ ಧರ್ಮಗುರು, ಸಂಶೋಧಕ ಡೇವಿಡ್ ಫ್ರಾವ್ಲೇ ಹೇಳಿದ್ದಾರೆ.
ಭಾರತದ ಸನಾತನ ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದು, ದೇಶವನ್ನು ಹೊಸ ಅಧ್ಯಾಯದ ಕಡೆ ಕೊಂಡೊಯ್ಯುತ್ತಿದೆ. ಅವರು ಮತ್ತೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು. ಪ್ರಧಾನಿ ಮೋದಿ ಭಾರತದ ಪುರಾತನ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ಮೋದಿ ಆಡಳಿತಾತ್ಮಕ ಮತ್ತು ಭಾರತೀಯ ನಾಗರೀಕತೆ ಪ್ರತಿಪಾದಕ ಎಂದ ಅವರು, ವಿಶ್ವದಲ್ಲಿ ಭಾರತದ ಧ್ವನಿಯನ್ನು ಮೋದಿ ಮೊಳಗಿಸಿದ್ದಾರೆ ಎಂದು ಸರ್ಟಿಫಿಕೇಟ್ ನೀಡಿದರು.
ವೇದ, ಜ್ಯೋತಿಷ್ಯ, ಆಯುರ್ವೇದ ವಿಚಾರದಲ್ಲಿ ಸಂಶೋಧಕನಾಗಿರುವ ಡೇವಿಡ್, ಭಾರತೀಯ ಸಂಸ್ಕೃತಿ ಬಗ್ಗೆ 30 ಪುಸ್ತಕ ಬರೆದಿದ್ದಾರೆ. ಅಮೇರಿಕಾದ ಪ್ರಜೆಯಾಗಿರುವ ಅವರು ಭಾರತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದಾಗಿ ಹೇಳಿದರು.

