ಭಾರತದ ಗಡಿದಾಟಿ ಬಂದ ಪಾಕ್ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತೀಯ ಸೇನೆ – Vishwanews24

Featured, ರಾಷ್ಟ್ರ ನ್ಯೂಸ್

ಶ್ರೀನಗರ,: ಇದೀಗ ಬಂದಿರುವ ಸುದ್ದಿಯ ಪ್ರಕಾರ, ಪಾಕಿಸ್ತಾನದ ವಾಯು ಸೇನೆಯ ಎಫ್-16 ಯುದ್ಧ ವಿಮಾನವನ್ನು ಭಾರತದ ವಾಯು ಸೇನೆಯ ಸುಖೋಯ್-30 ಯುದ್ಧ ವಿಮಾನ ಹೊಡೆದುರುಳಿಸಿದೆ.

ನೌಶೇರಾದ ಲಾಮ್ ಸೆಕ್ಟರ್ ನಲ್ಲಿ ಲಾಮ್ ವ್ಯಾಲಿ ನಲ್ಲಿ ಈ ಘಟನೆ ನಡೆದಿದೆ. ಆದರೆ, ಹೊಡೆದುರುಳಿಸಲಾದ ಯುದ್ಧ ವಿಮಾನದಿಂದ ಪೈಲಟ್ ಪ್ಯಾರಾಶೂಟ್ ಬಳಸಿ ಜಿಗಿದಿದ್ದು, ಆತನ ಪರಿಸ್ಥಿತಿಯ ಬಗ್ಗೆ ಮಾಹಿತಿ ಬಂದಿಲ್ಲ.

ಬಾಲಕೋಟ್, ಮುಜಫರಾಬಾದ್ ಮತ್ತು ಡಾಕೋಟಿಯಲ್ಲಿ ಭಾರತದ ವಾಯುಸೇನೆ ಮಂಗಳವಾರ ಉಗ್ರರ ನೆಲೆಗಳನ್ನು ನಾಶ ಮಾಡಿದ ಮೇಲೆ ಪಾಕಿಸ್ತಾನ ಪ್ರಥಮ ಬಾರಿಗೆ ಪ್ರತಿದಾಳಿ ಮಾಡಿದೆ.

ಭಾರತದ ಸೇನಾಪಡೆ ಕೂಡ ಸಂಪೂರ್ಣ ಸಿದ್ಧತೆಯಲ್ಲಿದ್ದು, ಈ ದಾಳಿಗೆ ಕೂಡ ತಿರುಗೇಟು ನೀಡಲು ತಯಾರಾಗಿದೆ. ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವಾರು ರಾಷ್ಟ್ರಗಳು ಪ್ರತಿದಾಳಿ ನಡೆಸದಂತೆ ಪಾಕಿಸ್ತಾನಕ್ಕೆ ಕಿವಿಮಾತು ಹೇಳಿದ್ದರೂ ಪಾಕ್ ಕೇಳುವ ಸ್ಥಿತಿಯಲ್ಲಿ ಇಲ್ಲ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ವರ್ತಿಸುತ್ತಿದೆ.

ಭಾರತದ ವಾಯು ಸೀಮೆ ನಿಮಯವನ್ನು ಉಲ್ಲಂಘಿಸಿರುವ ಪಾಕಿಸ್ತಾನದ ವಿಮಾನಗಳು, ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿರುವ ನೌಶೇರಾದಲ್ಲಿ ಬಾಂಬ್ ದಾಳಿ ನಡೆಸಿವೆ. ಭಾರತದ ವಾಯು ಸೇನೆ ಪಾಕ್ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾದರೂ, ಬಾಂಬ್ ಎಸೆದು ಪರಾರಿಯಾಗಿವೆ. ರಾಯ್ಟರ್ಸ್ ಸುದ್ದಿ ಏಜೆನ್ಸಿ ಪ್ರಕಾರ, ಕನಿಷ್ಠ ಮೂರು ಯದ್ಧ ವಿಮಾನಗಳು ಭಾರತದ ಗಡಿಯನ್ನು ಪ್ರವೇಶಿಸಿದ್ದವು.