ಭಾರತದ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಪ್ರಧಾನಿ ಮೋದಿಯವರು ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ : ಅಮಿತ್‌ ಶಾ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಭ ಕೋರಿದ್ದು, ಮೋದಿಯವರು ದೃಢ ಇಚ್ಛಾಶಕ್ತಿ, ನಿರ್ಣಾಯಕ ನಾಯಕತ್ವ ಮತ್ತು ದಣಿವರಿಯದ ಪರಿಶ್ರಮದ ಸಂಕೇತ ಎಂದು ಹೊಗಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇಶ ಕಂಡ ಪ್ರಸಿದ್ಧ ನಾಯಕ ಮೋದಿ. ನಿಮ್ಮ ನಾಯಕತ್ವದ ಅಡಿಯಲ್ಲಿ ಹೊರಹೊಮ್ಮುತ್ತಿರುವ ನವ ಭಾರತವು ಪ್ರಬಲ, ಸುರಕ್ಷಿತ ಮತ್ತು ವಿಶ್ವಾಸಾರ್ಹ ರಾಷ್ಟ್ರವಾಗಿ ವಿಶ್ವದಲ್ಲಿ ಒಂದು ಛಾಪು ಮೂಡಿಸಿದೆ ಎಂದು ಶಾ ಟ್ವೀಟ್‌ ಮಾಡಿದ್ದಾರೆ.

ಭಾರತದ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಪ್ರಧಾನಿ ಮೋದಿಯವರು ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ. ಸುಧಾರಣಾವಾದಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ರಾಜಕೀಯಕ್ಕೆ ಮಾತ್ರ ಹೊಸ ಮಾರ್ಗವನ್ನು ನೀಡಿಲ್ಲ. ಆರ್ಥಿಕ ಸುಧಾರಣೆಗಳೊಂದಿಗೆ ದಶಕಗಳಿಂದ ಇದ್ದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಎಲ್ಲರಿಗೂ ಹೆಮ್ಮೆ ತಂದಿದ್ದಾರೆ.

ಪ್ರತಿಯೊಬ್ಬ ಭಾರತೀಯನ ಜೀವನವನ್ನು ಸುಲಭಗೊಳಿಸಲು ನಿಮ್ಮ ಕಠಿಣ ಪರಿಶ್ರಮ ಮತ್ತು ದೃಢ ನಿರ್ಣಯವು ನಮಗೆ ಸ್ಫೂರ್ತಿಯಾಗಿದೆ. ಸಾರ್ವಜನಿಕ ಪ್ರತಿನಿಧಿಯಾಗಿ, ಕೆಲಸಗಾರರಾಗಿ ಮತ್ತು ದೇಶವಾಸಿಗಳಾಗಿ ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮೊಂದಿಗೆ ಪಾಲುದಾರರಾಗಿರುವುದೇ ಪುಣ್ಯ. ನಿಮ್ಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.