ಭಾರತದಲ್ಲಿ ತಾವು ಅಸುರಕ್ಷಿತರೆಂದು ಹೇಳುವವರ ಮೇಲೆ ಬಾಂಬ್ ಹಾಕಿ ಉಡಾಯಿಸಬೇಕು : ಬಿಜೆಪಿ ಶಾಸಕ ವಿಕ್ರಮ್ ಸೈನಿ
ಮುಜಫರ್ ನಗರ : ಭಾರತದಲ್ಲಿ ಅಭದ್ರತೆ ಇದೆ ಎಂದವರಿಗೆ ಬಾಂಬ್ ಹಾಕಿ ಉಡಾಯಿಸುತ್ತೇನೆ ಎಂದು ಮುಜಫರ್ ನಗರ ಬಿಜೆಪಿ ಶಾಸಕ ವಿಕ್ರಮ್ ಸೈನಿ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಆತಂಕವಿದೆ ಎಂದವರು ದೇಶದ್ರೋಹಿಗಳು, ಭಾರತದಲ್ಲಿ ವಾಸಿಸಲು ಆತಂಕವಿದೆ ಎಂದವರಿಗೆ ಬಾಂಬ್ ಹಾಕಿ ಕೊಲ್ಲಬೇಕು, ಯಾರೊಬ್ಬರನ್ನೂ ಬಿಡುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಾಸಕ “ಭಾರತದಲ್ಲಿ ತಾವು ಅಸುರಕ್ಷಿತರೆಂದು ಹೇಳುವವರ ಮೇಲೆ ಬಾಂಬ್ ಹಾಕಬೇಕು – ಇದು ನನ್ನ ವೈಯಕ್ತಿಕ ಅನ್ನಿಸಿಕೆ. ನಿಜಕ್ಕಾದರೆ ಹಾಗೆ ಹೇಳುವವರು ದೇಶ ದ್ರೋಹಿಗಳು. ಅಂಥವರನ್ನು ಶಿಕ್ಷಿಸಲು ಕಾನೂನನ್ನು ತರಬೇಕು, ಏಕೆಂದರೆ ಈ ರೀತಿಯ ಹೇಳಿಕೆಗಳು ದೇಶದ್ರೋಹದ ಕೃತ್ಯವಾಗುತ್ತದೆ. ನನಗೊಂದು ಸಚಿವ ಪದ ಕೊಡಿ. ನಾನು ಇಂಥವರ ಮೇಲೆ ಬಾಂಬ್ ಹಾಕುತ್ತೇನೆ; ಈ ರೀತಿಯ ಹೇಳಿಕೆ ನೀಡುವ ಯಾರನ್ನೂ ಬಿಡದೆ ಬಾಂಬ್ ಹಾಕಿ ನಾಶ ಮಾಡುತ್ತೇನೆ’.
“ಹಮ್ ತೋ ದೇಶ್ ದೀವಾನೇ ಹೇ” ಎಂದ ಅವರು “ದೇಶದಲ್ಲಿ ಅಸುರಕ್ಷತೆಯ ಭಾವನೆ ಹೊಂದಿರುವವರು ಒಂದೋ ದೇಶ ಬಿಟ್ಟು ತೆರಳಬೇಕು ಇಲ್ಲವೇ ಸರಕಾರ ಅವರಿಗೆ ಏನಾದರೂ ಏರ್ಪಾಟು ಮಾಡಬೇಕು,” ಎಂದು ಆಗ್ರಹಿಸಿದರು.
ಭಾರತದಲ್ಲಿ ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಕಾನೂನು ರೆಚಿಸುವಂತೆ ಆಗ್ರಹಿಸಿರುವ ಅವರು ಅಂತಹವರನ್ನು ದೇಶದ್ರೋಹಿಗಳು ಎಂದು ಹೇಳಿದರು.
#WATCH Vikram Saini, BJP MLA from Muzaffarnagar says 'My personal view is that those who say they feel unsafe and threatened in India should be bombed, give me a ministry and I will bomb all such people, not even one will be spared' pic.twitter.com/E9yWNH7MBF
— ANI UP (@ANINewsUP) January 4, 2019
