ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಪತನ : ಓರ್ವ ಪೈಲಟ್ ಸಾವು -Vishwanews24

Featured, ರಾಷ್ಟ್ರ ನ್ಯೂಸ್

ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಪತನ : ಓರ್ವ ಪೈಲಟ್ ಸಾವು -Vishwanews24

ನವದೆಹಲಿ : ಭಾರತೀಯ ವಾಯುಪಡೆ (ಐಎಎಫ್)ನ ಮಿಗ್-21 ಬೈಷನ್ ವಿಮಾನ ಅಪಘಾತಕ್ಕೀಡಾಗಿ, ಅದರಲ್ಲಿದ್ದಂತ ಓರ್ವ ಪೈಲೆಟ್ ಮೃತಪಟ್ಟಿರುವ ಘಟನೆ ಮಧ್ಯ ಭಾರತದ ವಾಯುನೆಲೆಯಲ್ಲಿ ನಡೆದಿದೆ.

ಇದನ್ನೂ ಓದಿ : ಮಂಗಳೂರು To ಮಣಿಪುರ : ಪರಿಸರ ಜಾಗೃತಿ ಮೂಡಿಸಲು 6 ಸಾವಿರ ಕಿ.ಮೀ. ಸೈಕಲ್ ಪಯಣ ಆರಂಭಿಸಿದ ಕುಡ್ಲದ ಯುವಕ ಶ್ರವಣ್ ಕುಮಾರ್ -Vishwanews24

ಇಂದು ಬೆಳಿಗ್ಗೆ, ಮಧ್ಯ ಭಾರತದ ವಾಯುನೆಲೆಯಲ್ಲಿ ಯುದ್ಧ ತರಬೇತಿ ಕಾರ್ಯಾಚರಣೆಗೆ ಹೊರಟಿದ್ದಾಗ. ಮಿಗ್-21 ಯುದ್ಧ ವಿಮಾನ ದುರಂತ ಅಪಘಾತದಲ್ಲಿ ಪರಿಣಾಮ, ಓರ್ವ ಪೈಲೆಟ್ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಈ ಕುರಿತಂತೆ ಎಐಎಫ್ ಟ್ವಿಟ್ ಮಾಡಿದ್ದು, ಈ ದುರಂತ ಘಟನೆಯಲ್ಲಿ ಐಎಎಫ್ ಗ್ರೂಪ್ ಕ್ಯಾಪ್ಟನ್ ಎ.ಗುಪ್ತಾ ಅವರನ್ನು ಕಳೆದುಕೊಂಡಿದೆ. ಐಎಎಫ್ ಸಂತಾಪ ವ್ಯಕ್ತಪಡಿಸಿದ್ದು,ಅಪಘಾತಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ವಿಚಾರಣಾ ನ್ಯಾಯಾಲಯ ರಚಿಸಲಾಗಿದೆ ಎಂಬುದಾಗಿ ತಿಳಿಸಿದೆ.

ಇದನ್ನೂ ಓದಿ : ಕೋವಿಡ್ 2ನೇ ಅಲೆ : ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ, ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿ, ಲಸಿಕೆ ಹಾಕಿಸಿಕೊಳ್ಳಿ : ಪ್ರಧಾನಿ ಮೋದಿ -Vishwanews24