ಮಂಗಳೂರು: CAA ವಿರೋಧಿ ಪ್ರತಿಭಟನೆಗೆ ಅಮೂಲ್ಯ ಆಹ್ವಾನ ರದ್ದು -Vishwanews24
ಮಂಗಳೂರು: ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಿಎಎ ವಿರುದ್ಧ ಪ್ರತಿಭಟನೆಯ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯಾಳನ್ನು ಫೆ.25ರಂದು ಮಂಗಳೂರಿನಲ್ಲಿ ನಡೆಯುವ ಸಿಎಎ ವಿರುದ್ಧದ ಪ್ರತಿಭಟನೆಯಿಂದ ಹೊರಗಿಡಲಾಗಿದೆ.
ಪಾಕ್ ಪರವಾದ ಘೋಷಣೆ ಖಂಡನೀಯ. ಪ್ರತಿಯೊಬ್ಬರು ತಾವಿರುವ ನೆಲವನ್ನು ಪ್ರೀತಿಸಬೇಕು. ಅದು ನಮ್ಮ ಕರ್ತವ್ಯ. ಆದುದರಿಂದ ಜೀವನದಲ್ಲಿ ದೇಶವನ್ನು ಚೆನ್ನಾಗಿ ಪ್ರೀತಿಸಬೇಕು. ಫೆ.25ಕ್ಕೆ ಅಮೂಲ್ಯಳನ್ನು ಮಂಗಳೂರಿನಲ್ಲಿ ಮುಸ್ಲಿಂ ಐಕ್ಯತಾ ವೇದಿಕೆ ಪ್ರತಿಭಟನೆಗೆ ಆಹ್ವಾನಿಸಿರುವುದನ್ನು ರದ್ದುಪಡಿಸಲಾಗಿದೆ ಎಂದು ಸಂಘಟಕ, ಮಾಜಿ ಮೇಯರ್ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
