ಮಂಗಳೂರು: ಅಕ್ರಮ ವಿದೇಶಿ ಕರೆನ್ಸಿ ಸಾಗಾಟ ; ₹18.80 ಲಕ್ಷ ಮೌಲ್ಯದ ಕರೆನ್ಸಿ ವಶ – Vishwanews24
ಮಂಗಳೂರು: ಅಕ್ರಮ ವಿದೇಶಿ ಕರೆನ್ಸಿ ಸಾಗಾಟ ; ₹18.80 ಲಕ್ಷ ಮೌಲ್ಯದ ಕರೆನ್ಸಿ ವಶ
ಮಂಗಳೂರು : ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾ.30 ರ ಬುಧವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯು ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈಗೆ ಪ್ರಯಾಣ ಬೆಳೆಸಲು ಸಿದ್ಧತೆ ನಡೆಸುತ್ತಿದ್ದ. ತಪಾಸಣೆಯ ವೇಳೆ 25,000 US ಡಾಲರ್ ಹಣವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ಇದರ ಭಾರತೀಯ ರೂಪಾಯಿ ಮೌಲ್ಯ 18,80,000 ರೂ. ಆಗಿದೆ .
ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾದ ಹಿನ್ನಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಡುಪಿ : ಮಾನವಹಕ್ಕುಗಳ ಪ್ರತಿಷ್ಠಾನದ ಡಾ. ಶಾನುಭಾಗ್ಗೆ ಹೃದಯಾಘಾತ ; ಐಸಿಯುನಲ್ಲಿ ಚಿಕಿತ್ಸೆ – Vishwanews24
