ಮಂಗಳೂರು : ಆಟೋದಲ್ಲಿ ಅಪ್ರಾಪ್ರ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ  ; ಚಾಲಕ ಸಹಿತ ಇಬ್ಬರಿಗೆ ಕಾರಾಗೃಹ ಶಿಕ್ಷೆ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಆಟೋದಲ್ಲಿ ಅಪ್ರಾಪ್ರ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ  ; ಚಾಲಕ ಸಹಿತ ಇಬ್ಬರಿಗೆ ಕಾರಾಗೃಹ ಶಿಕ್ಷೆ

ಮಂಗಳೂರು : ಅಪ್ರಾಪ್ರ ಬಾಲಕಿಗೆ ಅಟೋದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್ಟಿಎಸ್‌ಸಿ-1 ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಇಳಂತಿಲದ ನಿವಾಸಿ ಬೀಡಿ ತೆಗೆಯುವ ವೃತ್ತಿಯ ಅಬ್ದುಲ್‌ ಕರೀಂ (39), ಮೊಗ್ರು ಗ್ರಾಮ ಪಚ್ಚಡ್ಕ ಮನೆಯ ನಿವಾಸಿ ಆಟೋರಿಕ್ಷಾ ಚಾಲಕ ಸಾದಿಕ್‌ (34) ಶಿಕ್ಷೆಗೊಳಗಾದವರು.

ಮುಂಬೈ: ನಿಯಂತ್ರಣ ಕಳೆದುಕೊಂಡು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ ; 6 ಸಾವು , 49 ಮಂದಿ ಗಾಯ – vishwanews24

ಜೂ.18,2023 ರಂದು ಅಪ್ರಾಪ್ತ ಬಾಲಕಿ ಗ್ರಾಮಾಭಿವೃದ್ಧಿ ಯೋಜನೆಯೊಂದರ ಸಂಘದ ಹಣ ಕಟ್ಟಲೆಂದು ಬಂದಾರು ಗ್ರಾಮದ ನೇಲಾಳು ಪಲ್ಕೆ ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಕರೀಂ ಎಲ್ಲಿಗೆ ಹೋಗುವುದಾಗಿ ಬಾಲಕಿಯಲ್ಲಿ ಪ್ರಶ್ನೆ ಮಾಡಿದ್ದ. ಕುಂಟಾಲ ಪಲ್ಕೆ ತಲುಪಿದಾಗ ಆಟೋರಿಕ್ಷಾ ನಿಲ್ಲಿಸಿ ರಿಕ್ಷಾದಲ್ಲಿ ಬರಲು ಕರೆದಿದ್ದ. ಈತ ಇನ್ನೋರ್ವ ಆರೋಪಿ ಆಟೋರಿಕ್ಷಾ ಚಾಲಕ ಸಾದಿಕ್ ಕೂಡಾ ಬಾಲಕಿಯನ್ನು ಕರೆದಿದ್ದ. ಬಾಲಕಿ ರಿಕ್ಷಾದಲ್ಲಿ ಕುಳಿತಿದ್ದಳು. ಕರೀಂ ಆಕೆಗೆ 200 ರೂ. ನೀಡಿ ಅದನ್ನು ಸಂಘಕ್ಕೆ ಕಟ್ಟಿ ವಾಪಾಸು ಬರುವಾಗ ಆಟೊದಲ್ಲಿ ಬರುವಂತೆ ಹೇಳಿದ್ದ. ಬಾಲಕಿ ಹಣವನ್ನು ವಾಪಸ್‌ ಆತನಿಗೆ ನೀಡಿದ್ದಳು.

ಆಗ ಬೆಳ್ತಂಗಡಿಗೆ ಬರುತ್ತೀಯಾ ಎಂದು ಕೇಳಿದ್ದ. ಆಕೆ ಬರಲ್ಲ ಎಂದು ಹೇಳಿದಾಗ ಆಕೆಯ ಮೈ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಆಟೋರಿಕ್ಷಾದಿಂದ ಹಾರಿದ್ದು, ಗಾಯಗೊಂಡಿದ್ದಳು. ಕೂಡಲೇ ಇಬ್ಬರು ಆಟೋ ರಿಕ್ಷಾದಿಂದ ಹಾರಿದಾಗ ಆಟೋ ನಿಲ್ಲಿಸದೇ ತೆರಳಿದ್ದು, ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಲಾರಿ , ತಪ್ಪಿದ ಅನಾಹುತ – vishwanews24

ಒಂದನೇ ಆರೋಪಿ ಅಬ್ದುಲ್‌ ಕರೀಂಗೆ ಪೋಕ್ಸೋ ಕಾಯ್ದೆಯಡಿ ಕಲಂ 8 ರ ಅಡಿಯಲ್ಲಿ 5 ವರ್ಷಗಳ ಜೈಲು, 5000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಆರು ತಿಂಗಳ ಹೆಚ್ಚುವರಿ ಸಜೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯ ಕಲಂ 3(1)(ಡಬ್ಲ್ಯು) (ಐ) ಅಡಿಯಲ್ಲಿ 5 ವರ್ಷ ಸಾದಾ ಸಜೆ ಮತ್ತು 5,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ, ಅಲ್ಲದೆ ಪರಿಶಿಷ್ಟ ಜಾತಿ, ಪಂಗಡದವರ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(2)(ವಿಎ) 83 0 3542(1)(3) ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಇನ್ನೋರ್ವ ಆರೋಪಿ ಸಾದಿಕ್‌ಗೆ ಪೋಕೋ ಕಾಯ್ದೆಯ ಕಲಂ 8ರಡಿಯಲ್ಲಿ 3 ವರ್ಷಗಳ ಜೈಲು ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ ವಿಧಿಸಿದ್ದಾರೆ.

ದೇಶದ ಸರ್ವೋತ್ತಮ ಜಿ.ಪಂ. ಹೆಗ್ಗಳಿಕೆಗೆ ಪಾತ್ರವಾದ ಉಡುಪಿ ಜಿಲ್ಲಾ ಪಂಚಾಯತ್ – vishwanews24

Leave a Reply