ಮಂಗಳೂರು ಏರ್ ಪೋರ್ಟ್: ವಿಶೇಷವಾಗಿ ವಿನ್ಯಾಸದ ಪಾದರಕ್ಷೆಯ ಒಳಗೆ ಅಕ್ರಮ ಚಿನ್ನ ಸಾಗಾಟ : ಇಬ್ಬರ ಬಂಧನ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ವಿಶೇಷವಾಗಿ ವಿನ್ಯಾಸದ ಪಾದರಕ್ಷೆಯ ಒಳಗೆ ಅಕ್ರಮ ಚಿನ್ನ ಸಾಗಾಟ : ಏರ್ ಪೋರ್ಟ್ ನಲ್ಲಿಇಬ್ಬರ ಬಂಧನ -Vishwanews24

ಮಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಮಂಗಳೂರು ಏರ್‌ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

ದುಬೈನಿಂದ ಬಂದ ಸ್ಪೈಸ್‌ ಜೆಟ್‌‌ ಹಾಗೂ ಏರ್‌ ಇಂಡಿಯಾ ವಿಮಾನದಿಂದ ಇಳಿದು ಬಂದ ಕಾಸರಗೋಡು ನಿವಾಸಿ ಸುಕ್ಕುರ್ ಮೊಯಿದ್ದೀನ್ ಕುನ್ಹಿ (48) ಹಾಗೂ ಭಟ್ಕಳದ ಮಿಸ್ರಿ ನಸೀಮುಲ್ ಗನಿ (44) ಎಂಬವರು ವಿಶೇಷವಾಗಿ ವಿನ್ಯಾಸದ ಪಾದರಕ್ಷೆಯ ಒಳಗೆ ಚಿನ್ನವನ್ನಿಟ್ಟು ಸಾಗಾಟ ಮಾಡುತ್ತಿದ್ದರು.

ಆರೋಪಿಗಳಿಂದ 18.75 ಲಕ್ಷ ರೂ ಮೌಲ್ಯದ 405 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ವಿಭಾಗದ ಅಧಿಕಾರಿಗಳಾದ ಡಾ. ಕಪಿಲ್ ಗಡೆ, ರಾಕೇಶ್ ಕುಮಾರ್, ಸಂದೀಪ್ ಎಂ.ಎಸ್, ಚಂದ್ರಮೋಹನ್ ಮೀನಾ ಪಾಲ್ಗೊಂಡಿದ್ದರು