ಮಂಗಳೂರು : ಒಳ ಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟ , ಓರ್ವ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ -Vishwanews24
ಮಂಗಳೂರು : ಒಳ ಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟ , ಓರ್ವ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ -Vishwanews24
ಮಂಗಳೂರು, : ದುಬೈನಿಂದ ಬರುತ್ತಿದ್ದ ಓರ್ವ ಪ್ರಯಾಣಿಕನನ್ನು ಏ.8ರ ಗುರುವಾರ ಸಂಜೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಆತನಿಂದ 30.70 ಲಕ್ಷ ರೂ.ಗಳ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಬಂಧಿತನನ್ನು ಕಾಸರಗೋಡಿನ ಆಲಂಪಾಡಿ ಮೂಲದ ದ ಇಬ್ರಾಹಿಂ ಪನಾಲಂ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಈತ ದುಬೈನಿಂದ ಎಸ್ಜಿ 146 ಸ್ಪೈಸ್ ಜೆಟ್ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ್ದ.
ಆತನನ್ನು ಶೋಧಿಸಿದಾಗ ತನ್ನ ಒಳ ಉಡುಪಿನಲ್ಲಿ ಚಿನ್ನವನ್ನು ಮರೆಮಾಚಿ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದ. ಈತನಿಂದ 30.73 ಲಕ್ಷ ಮೌಲ್ಯದ 647.00 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕಸ್ಟಮ್ಸ್ ಕಮಿಷನರ್ ಅವಿನಾಶ್ ಕಿರಣ್ ರೊಂಗಾಲಿ ನೇತೃತ್ವದಲ್ಲಿ ಸೂಪರಿಂಟೆಂಡೆಂಟ್ ಸತೀಶ್ ಹಾಗೂ ಶ್ರೀಕಾಂತ್ ಕಾರ್ಯಚರಣೆ ನಡೆಸಿದ್ದಾರೆ.
ಪುತ್ತೂರು :ತನ್ನ ಮೊಬೈಲ್ ಸುಟ್ಟು ಹಾಕಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಆಟೋ ಡ್ರೈವರ್ -Vishwanews24
