ಮಂಗಳೂರು : ಓಲಂಪಿಕ್‌‌‌ನಲ್ಲಿ ಕಂಬಳವನ್ನು ಸೇರಿಸಬೇಕು , ಶ್ರೀನಿವಾಸ ಗೌಡರಿಗೆ ಚಿನ್ನದ ಪದಕ ಸಿಗಬೇಕು : ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕಂಬಳದ ಗದ್ದೆಯಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದ ಮೂಡಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸಗೌಡ ಅವರಿಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಔಟ್ ಲುಕ್ ನಲ್ಲಿ ಪ್ರಕಟವಾದ ಶ್ರೀನಿವಾಸ ಗೌಡರ ಸಾಧನೆ ಕುರಿತ ಲೇಖನವನ್ನು ಟ್ವೀಟ್ಟರ್ ನಲ್ಲಿ ಹಂಚಿಕೊಂಡ ಆನಂದ್ ಮಹೀಂದ್ರಾ, ಒಮ್ಮೆ ಈ ವ್ಯಕ್ತಿಯ ಮೈಕಟ್ಟನ್ನು ಗಮನಿಸಿ, ಈತ ಅಸಾಧರಣ ಸಾಹಸ ಮಾಡಲು ಸಮರ್ಥನಾಗಿದ್ದಾನೆ.

ಈತನಿಗೆ ಕೇಂದ್ರ ಕ್ರೀಡಾ ಸಚಿವರಾದ ಕಿರಿಣ್ ರಿಜಿಜು 100 ಮೀ ಓಟಗಾರನಾಗಲು ಸಮರ್ಥ ತರಬೇತಿಯನ್ನು ನೀಡಲು ಅನುಕೂಲ ಕಲ್ಪಿಸಬೇಕು ಅಥವಾ ಓಲಂಪಿಕ್‌‌‌ನಲ್ಲಿ ಕಂಬಳವನ್ನು ಸೇರಿಸಬೇಕು. ಏನೇ ಆಗಲಿ ಶ್ರೀನಿವಾಸ ಗೌಡ ಅವರಿಗೆ ಚಿನ್ನದ ಪದಕಸಿಗಬೇಕು ಎಂದು ಟ್ವೀಟ್‌‌ ಮಾಡಿದ್ದರು.

ಫೆ. 1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್ ನ ಕಂಬಳ ಕೋಣಗಳ ಟ್ರ್ಯಾಕ್ ನಲ್ಲಿ ಕೇವಲ 13.62 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಶ್ರೀನಿವಾಸ್ ಗೌಡ ಅವರನ್ನು ಉಸೇನ್ ಬೋಲ್ಟ್ ಜೊತೆಗೆ ಹೋಲಿಸಲಾಗಿದೆ.