ಮಂಗಳೂರು : ಕರಾವಳಿಯ ಕೋಗಿಲೆ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ – VIshwanews24

Featured, ದಕ್ಷಿಣ ಕನ್ನಡ

ಮಂಗಳೂರು : ಕರಾವಳಿಯ ಕೋಗಿಲೆ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ – VIshwanews24

ಮಂಗಳೂರು : ಕರಾವಳಿಯ ಕೋಗಿಲೆ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕಳೆದ 28 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಶೀಲಾ ದಿವಾಕರ್ ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

3000ಕ್ಕೂ ಅಧಿಕ ಪ್ರತಿಷ್ಠಿತ ವೇದಿಕೆಗಳಲ್ಲಿ ಜನಮೆಚ್ಚುಗೆಯ ಕಾರ್ಯಕ್ರಮ ನೀಡಿದ ಖ್ಯಾತ ಗಾಯಕಿ. ಸಂಗೀತದ ಮೂಲಕ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಿದವರು ಶೀಲಾ ದಿವಾಕರ್. ಸಂಗೀತ ಕ್ಷೇತ್ರದಲ್ಲಿ ಅವಳಿ ಸಹೋದರಿಯರಾಗಿ ಶೀಲ ಮತ್ತು ಶೈಲ ಅವರು ಪ್ರಸಿದ್ಧಿಯನ್ನ ಪಡೆದುಕೊಂಡಿದ್ದರು.

ಉಡುಪಿ : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಗಣರಾಜ್ಯೋತ್ಸವ ಆಚರಣೆ – Vishwanews24

Leave a Reply