ಮಂಗಳೂರು : ಕಳ್ಳತನ ಅಥವಾ ಕಳೆದುಕೊಂಡ ಫೋನ್ ಬ್ಲಾಕ್ ಮಾಡಲು ಹೊಸ ವಿಧಾನ ಜಾರಿ : ದ.ಕ.ಎಸ್ಪಿ – Vishwanews24
ಕಳ್ಳತನ ಅಥವಾ ಕಳೆದುಕೊಂಡ ಫೋನ್ ಬ್ಲಾಕ್ ಮಾಡಲು ಹೊಸ ವಿಧಾನ ಜಾರಿ : ದ.ಕ.ಎಸ್ಪಿ
ಮಂಗಳೂರು : ಕಳುವಾದ ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್ ಗಳನ್ನು ಬ್ಲಾಕ್ ಮಾಡುವ ಹೊಸ ವಿಧಾನವನ್ನು ಪೋಲಿಸ್ ಇಲಾಖೆ ಜಾರಿಗೊಳಿಸಿದ್ದು, ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮಾತೆ ವಿಕ್ರಮ್ ಪ್ರಕಟಣೆ ಹೊರಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಳುವಾದ/ಕಾಣೆಯಾದ/ಸುಲಿಗೆಯಾದ Mobile Phone ಗಳು ಸೈಬರ್ ಅಪರಾಧ ನಾರ್ಕೋಟಿಕ್ಸ್ ಅಪರಾಧ ಸರಿದಂತೆ ಇತರ ಗಂಭೀರ ಅಪರಾಧಗಳಲ್ಲಿ ಬಳಕೆಯಾಗುತ್ತಿರುವುದು ಗಣನೀಯವಾಗಿ ಕಂಡುಬಂದಿರುತ್ತದೆ. ಇಂತಹ Mobile Phone ಗಳ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರ ಟೆಲಿಕಮ್ಯುನಿಕೇಶನ್ ಇಲಾಖೆಯಿಂದ ಕಳುವಾದ/ಕಾಣಿಯಾದ/ಸುಲಿಗೆಯಾದ Mobile Phone ಗಳನ್ನು ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿರುತ್ತದೆ ಹಾಗೂ ಪೊಲೀಸ್ ಇಲಾಖೆಯಿಂದ ಕೂಡಾ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ.

ಈ ಕೆಳಕಂಡ ವಿಧಾನಗಳನ್ನು ಅನುಸರಿಸುವುದರ ಮೂಲಕ ಕಳುವಾದ ಕಾಣೆಯಾದ ಸುಲಿಗೆಯಾದ Mobile Phone ಗಳನ್ನು ಬ್ಲಾಕ್ ಮಾಡಬಹುದಾಗಿದೆ.
ಪುತ್ತೂರು:ವಿದ್ಯುತ್ ಕಂಬಕ್ಕೆ ಗುದ್ದಿ 50 ಅಡಿ ಆಳದ ತೋಟಕ್ಕೆ ಬಿದ್ದ ಕಾರು : ಗ್ರಾ.ಪಂ ಸದಸ್ಯ ಮೃತ್ಯು – Vishwanews24
➡️ ನಿಮ್ಮ Mobile Phone ಕಳುವು ಕಾಣೆಯಾದರೆ/ಸುಲಿಗೆಯಾದರೆ ತಾವು ತಕ್ಷಣವೇ KSP E-Lost ಅಪ್ಲಿಕೇಶನ್ ನಲ್ಲಿ ದೂರನ್ನು ಸಲ್ಲಿಸಿ Digital E Acknowledgement ಪಡೆದುಕೊಳ್ಳಬೇಕು, ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳುವುದು, ಸ್ವೀಕೃತಿಯ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು.]
➡️ ನೀವು ಕಳೆದುಕೊಂಡಿರುವ ಸಿಮ್ ಕಾರ್ಡ್ ಅನ್ನು ಸಂಬಂಧಪಟ್ಟ ಸರ್ವಿಸ್ ಪ್ರೊವೈಡರ್ ನಿಂದ ಮತ್ತೆ ಪಡೆದುಕೊಂಡು, ಒಟಿಪಿ ಪಡೆಯಲು ಸದರಿ ಸಿಮ್ ಕಾರ್ಡನ್ನು ಚಾಲನೆಯಲ್ಲಿ ಇಟ್ಟುಕೊಳ್ಳುವುದು. CEIR PORTAL ನಲ್ಲಿ ಒಟಿಪಿ ಪಡೆಯಲು ಇದು ಅನುಕೂಲವಾಗುತ್ತದೆ.
➡️ www.ceir.gov.in ವೆಬ್ ಸೈಟ್ಗೆ ಹೋಗಿ ತಮ್ಮ ಕಳುವಾದ/ಕಾಣೆಯಾದ/ಸುಲಿಗೆಯಾದ Mobile Phone ಗಳ ಮಾಹಿತಿಯನ್ನು ನಮೂದಿಸಬೇಕು. ಸದರಿ ಮಾಹಿತಿ ನಮೂದಿಸಿದ 24 ಗಂಟೆಗಳಲ್ಲಿ ತಮ್ಮ Mobile Phone ಬ್ಲಾಕ್ ಆಗುತ್ತದೆ. ನಂತರ ಯಾರೂ ಕೂಡಾ ಆ Mobile ಅನ್ನು ದುರ್ಬಳಕೆ ಮಾಡಲು ಸಾಧ್ಯವಿರುವುದಿಲ್ಲ.
➡️ ಕಳುವಾದ/ಕಾಣೆಯಾದ ಸುಲಿಗೆಯಾದ Mobile Phone ಪತ್ತೆಯಾದರೆ ಈಗಾಗಲೇ ತಿಳಿಸಿರುವ CEIR PORTAL ನಲ್ಲಿ ಲಾಗಿನ್ ಆಗಿ Unblock ಮಾಡಿ ಉಪಯೋಗಿಸಬಹುದು.
➡️ ಹಾಗೆಯೇ ಸಾರ್ವಜನಿಕರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೆ EIR PORTAL ಮೂಲಕ ಕಳುವಾದ/ಕಾಣೆಯಾದ Mobile Phone ಅನ್ನು Block ಮಾಡಲಾಗುವುದು ಹಾಗೂ ಸದರಿ Mobile Phone ಪತ್ತೆಯಾದಲ್ಲಿ Unblock ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಕಾರಿಗೆ ಹಿಂಬದಿಂದ ಗುದ್ದಿದ ಬಸ್ಸು – ಜಕಾಮ್ ಗೊಂಡ ಕಾರು ; ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯ : Vishwanews24
