ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ : ಆರೋಪಿ ರಾಜೇಶ್‌ ಭಟ್‌ ನ್ಯಾಯಾಲಯಕ್ಕೆ ಶರಣು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ : ಆರೋಪಿ ರಾಜೇಶ್‌ ಭಟ್‌ ನ್ಯಾಯಾಲಯಕ್ಕೆ ಶರಣು – Vishwanews24

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ವಕೀಲ ಕೆ.ಎಸ್‌.ಎನ್‌. ರಾಜೇಶ್‌ ಭಟ್‌ ಕೊನೆಗೂ ನ್ಯಾಯಾಲಯಕ್ಕೆ ಡಿ.20ರ ಸೋಮವಾರ ಶರಣಾಗಿದ್ದಾನೆ.

ಕಾನೂನು ಮಹಾ ವಿದ್ಯಾಲಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕನಾಗಿದ್ದ ಕೆ.ಎಸ್‌.ಎನ್‌. ರಾಜೇಶ್‌ ಭಟ್ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದ.

ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ ಇಲಾಖೆ ಆರೋಪಿ ರಾಜೇಶ್ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸಿತ್ತು.. ಇದಲ್ಲದೆ ಎಲ್ಲಾ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಲಾಗಿತ್ತು. ನ್ಯಾಯವಾದಿಗೆ ಕೃತ್ಯಕ್ಕೆ ಹಾಗೂ ಕೃತ್ಯದ ಬಳಿಕ ಸಹಕರ ನೀಡಿದವರನ್ನು ವಶಕ್ಕೆ ಪಡೆಯಲಾಗಿತ್ತು. ಅದರೂ ಇದುವರೆಗೆ ಆರೋಪಿಯ ಸುಳಿವು ಪತ್ತೆಯಾಗಿರಲಿಲ್ಲ. ಇದರೊಂದಿಗೆ ಆರೋಪಿ ಸಲ್ಲಿಸಿಲ್ಲ ನಿರೀಕ್ಷಾಣಾ ಜಾಮೀನು ಅರ್ಜಿ ಜಿಲ್ಲಾ ಹಾಗೂ ಹೈಕೋರ್ಟ್ ನಿಂದಲೂ ಈತನ ಅರ್ಜಿ ಜಾಮೀನು ನಿರಾಕರಣೆಯಾಗಿತ್ತು. ಈ ನಡುವೆ ಜಿಲ್ಲಾ ಮೂರನೇ ಜೆಎಂಎಫ್ ಸಿ ಶರಣಾಗಿದ್ದಾನೆ.

ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ , ನಾಳೆ ಸದನದಲ್ಲಿ ವಿಧೇಯಕ ಮಂಡನೆ – Vishwanews24