ಮಂಗಳೂರು : ಕುಕ್ಕರ್ ಬಾಂಬ್ ಸ್ಪೋಟದ ಗಾಯಾಳುಆಟೋ ಚಾಲಕ ಪುರುಷೋತ್ತಮ ಪೂಜಾರಿಯ ಚಿಕಿತ್ಸಾ ವೆಚ್ಚದ ಜವಬ್ದಾರಿ ಹೊತ್ತ ಜಿಲ್ಲಾಡಳಿತ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಕುಕ್ಕರ್ ಬಾಂಬ್ ಸ್ಪೋಟದ ಗಾಯಾಳುಆಟೋ ಚಾಲಕ ಪುರುಷೋತ್ತಮ ಪೂಜಾರಿಯ ಚಿಕಿತ್ಸಾ ವೆಚ್ಚದ ಜವಬ್ದಾರಿ ಹೊತ್ತ ಜಿಲ್ಲಾಡಳಿತ

ಮಂಗಳೂರು :ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟದ ಗಾಯಾಳು ಆಟೋ ಚಾಲಕ ಪುರುಷೋತ್ತಮ ಪೂಜಾರಿಯ ಚಿಕಿತ್ಸಾ ‌ವೆಚ್ಚ ಭರಿಸುವುದಾಗಿ‌ ಜಿಲ್ಲಾಡಳಿತ ತಿಳಿಸಿದೆ. ಈ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ವೈದ್ಯಕೀಯ ಆಸ್ಪತ್ರೆಯ ‌ಮುಖ್ಯಸ್ಥರಿಗೆ ದಕ್ಷಿಣಕನ್ನಡ ಜಿಲ್ಲಾಡಳಿತ ಪತ್ರ ಬರೆದಿದೆ.

ಪತ್ರದಲ್ಲಿ ‘ಸಂತ್ರಸ್ತರ ಕುಟುಂಬದಿಂದ ಯಾವುದೇ ವೆಚ್ಚವನ್ನು ಭರಿಸಲು ಒತ್ತಡ ಹಾಕದೇ ಅವರಿಗೆ ಸೂಕ್ತವಾದ ಚಿಕಿತ್ಸೆಯನ್ನು ಮುಂದುವರಿಸುವಂತೆ ಫಾದರ್ ಮುಲ್ಲರ್ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಜಿಲ್ಲಾಡಳಿತ ಪತ್ರದ ಮೂಲಕ ತಿಳಿಸಿದೆ.

ಈ ಹಿಂದೆ ಚಾಲಕ ಪುರುಷೋತ್ತಮ ಅವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದಾಗ ಧನ ಸಹಾಯ ನೀಡಿದ್ದರು. ಇನ್ನು ಅವರ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಗುರುಬೆಳದಿಂಗಳು ಫೌಂಡೇಶನ್ ಅವರ ಮನೆಯ ನವೀಕರಣ ಕಾರ್ಯಕ್ಕೆ ಕೂಡಾ ನೆರವು ನೀಡಿದೆ.

ಉಳ್ಳಾಲ : ಗ್ರಹಪ್ರವೇಶದ ದಿನ ವಾಸ್ತು ಹೋಮದ ಹೊಗೆಯ ನಡುವೆ  ಕಳ್ಳನ ಕೈಚಳಕ ; ಲಕ್ಷಾಂತರ ಮೌಲ್ಯದ ನಗ ನಗದು ಕಳ್ಳತನ – Vishwanews24

Leave a Reply