ಮಂಗಳೂರು: ಕೆಮಿಕಲ್ ಹೋಲ್ಡರ್ ಡೆಲಿವರಿ ನೆಪದಲ್ಲಿ ಅಪರಿಚಿತರಿಂದ ₹1.18 ರೂ. ಲಕ್ಷ ವಂಚನೆ – vishwanews24
ಮಂಗಳೂರು: ಕೆಮಿಕಲ್ ಹೋಲ್ಡರ್ ಡೆಲಿವರಿ ನೆಪದಲ್ಲಿ ಅಪರಿಚಿತರಿಂದ ₹1.18 ರೂ. ಲಕ್ಷ ವಂಚನೆ
ಮಂಗಳೂರು: ಕೆಮಿಕಲ್ ಹೋಲ್ಡರ್ ಡೆಲಿವರಿ ಮಾಡುವುದಾಗಿ ನಂಬಿಸಿ, ಅಪರಿಚಿತ ವ್ಯಕ್ತಿಗಳು 1.18 ಲಕ್ಷ ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಂಗಳೂರಿನ ಕಂಪೆನಿಯಲ್ಲಿ ಸೀನಿಯರ್ ಕೆಮಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿದ್ದಾರೆ. ಅ.10ರಂದು ಸಂಸ್ಥೆಗೆ ಬೇಕಾದ ಕೆಮಿಕಲ್ ಹೋಲ್ಡರನ್ನು ಖಾನ್ ಪುರದ ಗೇಲ್ ಇಂಡಿಯಾ ಕಂಪೆನಿಯಿಂದ ಆರ್ಡರ್ ಮಾಡಿದ್ದಾರೆ. ಅ.೫ರಂದು ಅವರ ವಾಟ್ಸಾಪ್ ಸಂಖ್ಯೆಗೆ ಯಾರೋ ಅಪರಿಚಿತರು ಎಪಿಕೆ ಫೈಲ್ ನ ಲಿಂಕ್ ಕಳುಹಿಸಿರುತ್ತಾರೆ.
ಉಡುಪಿ- ಉಚ್ಚಿಲ ದಸರಾ ಶೋಭಾಯಾತ್ರೆ : ವಾಹನ ಸಂಚಾರಕ್ಕೆ ಬದಲಿ ಮಾರ್ಗ – vishwanews24
ದೂರುದಾರರು ಈ ಎಪಿಕೆ ಫೈಲ್ ಅನ್ನು ಕೆಮಿಕಲ್ ಹೊಲ್ಡರ್ ನ ಡೆಲಿವರಿ ಬಗ್ಗೆ ಟ್ರಾಕಿಂಗ್ ಮೇಸೆಜ್ ಎಂದು ನಂಬಿ ಲಿಂಕ್ ಕ್ಲಿಕ್ ಮಾಡಿರುತ್ತಾರೆ. ಈ ವೇಳೆ ಮೊಬೈಲ್ ನಲ್ಲಿ ಒಂದು ಆ್ಯಪ್ ಓಪನ್ ಆಗಿದೆ. ಬಳಿಕ ಅಲ್ಲಿ ಸೂಚಿಸಿದಂತೆ ಆ್ಯಪ್ ನಲ್ಲಿ ಹೆಸರು ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಭರ್ತಿ ಮಾಡಿರುತ್ತಾರೆ. ನಂತರ ಅವರ ಕ್ರೆಡಿಟ್ ಕಾರ್ಡ್ ನಿಂದ ಹಂತ ಹಂತವಾಗಿ ಒಟ್ಟು 1,18,707 ರೂ. ಯಾರೋ ಅಪರಿಚಿತನ ಖಾತೆಗೆ ವರ್ಗಾವಣೆಯಾಗಿದೆ.
ದೂರುದಾರರಿಗೆ ಅಪರಿಚಿತರು ಡೆಲಿವರಿ ಟ್ರ್ಯಾಕಿಂಗ್ ಹೆಸರಿನಲ್ಲಿ ಆನ್ ಲೈನ್ ಮೂಲಕ ಒಟ್ಟು 1,18,707 ರೂ. ವಂಚನೆ ಮಾಡಿರುತ್ತಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ದಾಖಲಿಸಿದ್ದಾರೆ.
ಉಡುಪಿ- ಉಚ್ಚಿಲ ದಸರಾ ಶೋಭಾಯಾತ್ರೆ : ವಾಹನ ಸಂಚಾರಕ್ಕೆ ಬದಲಿ ಮಾರ್ಗ – vishwanews24
