ಮಂಗಳೂರು: ಕೊರಗಜ್ಜ ಕೋಲ ಹಿನ್ನೆಲೆ  – ಅಮಿತ್ ಶಾ ರೋಡ್ ಶೋ ರದ್ದು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕೊರಗಜ್ಜ ಕೋಲ ಹಿನ್ನೆಲೆ  – ಸಚಿವ ಅಮಿತ್ ಶಾ ರೋಡ್ ಶೋ ರದ್ದು

ಮಂಗಳೂರು: ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ವಿಮಾನ ನಿಲ್ದಾಣದಿಂದ ನಗರದ ತನಕ ರೋಡ್ ಶೋ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಅದು ಇದೀಗ ರದ್ದುಕೊಂಡಿದೆ. ಕೊರಗಜ್ಜ ಕೋಲ ಹಿನ್ನೆಲೆ ರದ್ದುಗೊಳಿಸಲಾಗಿದೆ.

ರೋಡ್ ಶೋ ಸಂಚರಿಸುವ ದಾರಿಯಲ್ಲಿ ಕೊರಗಜ್ಜ ದೈವದ ಕೋಲ ಹಿನ್ನೆಲೆಯಲ್ಲಿ ಕೊರಗಜ್ಜ ದೈವದ ಕೋಲಕ್ಕೆ ಸಮಸ್ಯೆಯಾಗಬಾರದೆಂದು ರೋಡ್ ಶೋ ರದ್ದುಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ಶನಿವಾರದಂದು ಕೋಲ ನಡೆಯಲಿದೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ರೋಡ್ ಶೋ ರದ್ದುಗೊಳಿಸಲಾಗಿದೆ.

ಇಂದು ಬಿಡುಗಡೆಗೆ ಸಿದ್ದವಾಗಿದ್ದ ‘ಪಿಲಿ’ ತುಳುಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ತಡೆಯಾಜ್ಞೆ – Vishwanews24

ಈ ನಡುವೆ ಪದವಿನಂಗಡಿ ಬಳಿಯ ಖಾಸಗಿ ಸಭಾಂಗಣದಲ್ಲಿ ನಡೆಯಬೇಕಿದ್ದ ಬಿಜೆಪಿ ಪಕ್ಷದ ಸಭೆಯೂ ಕೂಡ ಸ್ಥಳಾಂತರಗೊಂಡಿದೆ. ಸಭೆಯನ್ನು ಮಂಗಳೂರು ಏರ್ ಪೋರ್ಟ್ ಬಳಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪಕ್ಷದ ಸಭೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

Leave a Reply