ಮಂಗಳೂರು : ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಚರ್ಮಗಂಟು ರೋಗ – ನೂರಾರು ಜಾನುವಾರುಗಳು ಸಾವು – Vishwanews24
ಮಂಗಳೂರು : ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಚರ್ಮಗಂಟು ರೋಗ – ನೂರಾರು ಜಾನುವಾರುಗಳು ಸಾವು
ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ಆತಂಕ, ಹೈನುಗಾರಿಕೆ ಕೃಷಿಕರು ಕಂಗಾಲು..
ಚರ್ಮಗಂಟು ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕ್ರಮ..
ಜನವರಿ 15 ರ ವೇಳೆಗೆ ಎಲ್ಲಾ ಜಾನುವಾರುಗಳಿಗೆ ಲಸಿಕೆ : ಪ್ರಭು ಚೌಹ್ವಾಣ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳ ಚರ್ಮಗಂಟು ರೋಗ ದಿನೇ ದಿನೇ ಉಲ್ಬಣಗೊಂಡಿದ್ದು, ಹೈನುಗಾರಿಕೆ ಕೃಷಿಕರು ಕಂಗಾಲಾಗಿದ್ದಾರೆ. ಅಪಾಯಕಾರಿ ಚರ್ಮ ಗಂಟು ರೋಗದ ಬಾಧೆಯಿಂದ ನೂರಾರು ಜಾನುವಾರುಗಳು ಸಾವನಪ್ಪಿದ್ದು, ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ಆತಂಕ ಕೃಷಿಕರದ್ದು ಹಾಗೂ ಪಶುಸಂಗೋಪನೆ ಇಲಾಖೆಯದ್ದು.
ಕಳೆದ ಕೆಲ ಸಮಯದಿಂದ ಜಾನುವಾರುಗಳಲ್ಲಿ ಮಾರಣಾಂತಿಕ ಕಾಯಿಲೆ ಕಾಣಿಸಿಕೊಂಡಿದ್ದು, ಸಾವಿರಾರು ರೂಪಾಯಿಗಳ ನಷ್ಟವನ್ನು ಕೃಷಿಕರು ಅನುಭವಿಸಿದ್ದಾರೆ. ಇಲಾಖೆ ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಮನೆಮನೆಗೆ ತೆರಳಿ ಇಂಜೆಕ್ಷನ್ ನೀಡುವ ಕೆಲಸ ಪ್ರಾಥಮಿಕ ಹಂತದಲ್ಲಿ ಮಾಡಿದೆ, ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಶಿಬಿರಗಳನ್ನು ನಡೆಸಿದೆ.

ಆದರೆ ಲಸಿಕೆ ನೀಡಿದ ಬಳಿಕವೂ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಹಲವು ಜಾನುವಾರುಗಳು ಸಾವನ್ನಪ್ಪಿವೆ.
ಚರ್ಮಗಂಟು ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕ್ರಮ.. ಜನವರಿ 15 ರ ವೇಳೆಗೆ ಎಲ್ಲಾ ಜಾನುವಾರುಗಳಿಗೆ ಲಸಿಕೆ : ಪ್ರಭು ಚೌಹ್ವಾಣ್
ರಾಜ್ಯದಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಜನವರಿ 15 ರ ವೇಳೆಗೆ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹ್ವಾಣ್ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಚರ್ಮಗಂಟು ರೋಗ ನಿಯಂತ್ರಿಸುವ ಸಲುವಾಗಿ ಈಗಾಗಲೇ 92 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಮುಂದಿನ ವರ್ಷದ ಜನವರಿ 15 ರ ವೇಳೆಗೆ ಎಲ್ಲಾ ರಾಸುಗಳಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಸುಗಳಿಗೆ ಚರ್ಮಗಂಟು ರೋಗ 22 ರಾಜ್ಯಗಳಲ್ಲಿ ಬಂದಿದೆ. ರಾಜಸ್ಥಾನದಲ್ಲಿ 75 ಸಾವಿರ ಸಾವು ಸಂಭವಿಸಿದ್ದು, ರಾಜ್ಯದಲ್ಲಿ ಈವರೆಗೆ 22 ಸಾವಿರ ರಾಸುಗಳಿಗೆ ಮಾತ್ರ ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದ್ದಾರೆ.
ಉಡುಪಿ: ಮೀನುಗಾರರ ಮಕ್ಕಳಿಗೆ ಶಿಷ್ಯವೇತನ: ಅರ್ಜಿ ಆಹ್ವಾನ – Vishwanews24
