ಮಂಗಳೂರು: ಡಿಸಿಪಿ ಕಾರಿನ ಮೇಲೆ ಮರಳು ಲಾರಿ ಹತ್ತಿಸಲು ಯತ್ನಿಸಿದ ಚಾಲಕನ ಬಂಧನ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಡಿಸಿಪಿ ಕಾರಿನ ಮೇಲೆ ಮರಳು ಲಾರಿ ಹತ್ತಿಸಲು ಯತ್ನಿಸಿದ ಚಾಲಕನ ಬಂಧನ – Vishwanews24

ಮಂಗಳೂರು : ಡಿಸಿಪಿ ಕಾರಿನ ಮೇಲೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಹತ್ತಿಸಲು ಪ್ರಯತ್ನಿಸಿರುವ ಘಟನೆ ಪರಂಗಿಪೇಟೆ ಔಟ್​ಪೋಸ್ಟ್​ನಲ್ಲಿ ನಡೆದಿದ್ದು, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಡ್ಯಾರು ಬಳಿ ಅಕ್ರಮ ಮರಳು ಸಾಗಣೆ ನಡೆಯುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ವೇಳೆ ದಾಳಿ ನಡೆಸಿದ್ದ ಡಿಸಿಪಿ ಹರಿರಾಮ್ ಶಂಕರ್​ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಬೆನ್ನಟ್ಟಿ, ಪರಂಗಿಪೇಟೆ ಔಟ್​ ಪೋಸ್ಟ್​ ಬಳಿ ಲಾರಿ ಅಡ್ಡಗಟ್ಟಿದ್ದರು. ಈ ವೇಳೆ ಡಿಸಿಪಿ ಕಾರಿನ ಮೇಲೆ ಲಾರಿ ಹತ್ತಿಸಲು ಚಾಲಕ ಪ್ರಯತ್ನಿಸಿದ್ದ. ಬಳಿಕ ಔಟ್​ಪೋಸ್ಟ್​ನ ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ.

ಮತ್ತೆ ಮರಳು ಸಾಗಣೆ ಲಾರಿ ಹಿಂಬಾಲಿಸಿದ್ದ ಡಿಸಿಪಿ ಹರಿರಾಮ್ ಸೂಚನೆಯಂತೆ ಪೊಲೀಸರು ಬಂಟ್ವಾಳದಲ್ಲಿ ಮರಳು ಲಾರಿ ವಶಕ್ಕೆ ಪಡೆದರು. ಲಾರಿ ಚಾಲಕ ಮತ್ತು ಲಾರಿಯನ್ನು ಹಿಂಬಾಲಿಸುತ್ತಿದ್ದ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದರು.

ಆರೋಪಿಗಳ ವಿರುದ್ಧ ಮರಳು ಕಳವು, ನಿರ್ಲಕ್ಷ್ಯದ ಚಾಲನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ  ವಾಹನ ಮೇಲ್ಸೇತವೆ ನಿರ್ಮಾಣಕ್ಕೆ 50 ಕೋ.ರೂ ಅನುದಾನ : ಶೋಭಾ ಕರಂದ್ಲಾಜೆ