ಮಂಗಳೂರು: ದ.ಕ., ಉಡುಪಿಯಲ್ಲಿ ನಾಳೆ ಈದುಲ್ ಪಿತ್ರ್ ಆಚರಣೆ -Vishwanews24
ಮಂಗಳೂರು: ದ.ಕ., ಉಡುಪಿಯಲ್ಲಿ ನಾಳೆ ಈದುಲ್ ಪಿತ್ರ್ ಆಚರಣೆ -Vishwanews24
ಮಂಗಳೂರು: ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಶವ್ವಾಲ್ನ ಪ್ರಥಮ ಚಂದ್ರದರ್ಶನ ಆಗಲಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 3ರ ಮಂಗಳವಾರದಂದು ಈದುಲ್ ಪಿತ್ರ್ ಆಚರಣೆ ಮಾಡಲಾಗುವುದು ಎಂದು ಎರಡೂ ಜಿಲ್ಲೆಗಳ ಖಾಝಿಗಳು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಶವ್ವಾಲ್ನ ಪ್ರಥಮ ಚಂದ್ರದರ್ಶನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಹಬ್ಬವನ್ನು ಮಂಗಳವಾರ ಆಚರಿಸಲು ದ.ಕ. ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸ್ಜಿದ್ ಮತ್ತು ಈದ್ಗಾ ಮಸ್ಜಿದ್ನ ಅಧ್ಯಕ್ಷ ಹಾಜಿ ಯೇನಪೊಯ ಅಬ್ದುಲ್ಲಾ ಕುಂಞಿ ತಿಳಿಸಿದ್ದಾರೆ.
