ಮಂಗಳೂರು : ‘ನಕ್ಸಲ್’ ಸಂಬಂಧ ಆರೋಪ ಪ್ರಕರಣ: ವಿಠಲ ಮಲೆಕುಡಿಯ, ತಂದೆ ಲಿಂಗಣ್ಣ‌ ಮಲೆಕುಡಿಯ ನಿರ್ದೋಷಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ‘ನಕ್ಸಲ್’ ಸಂಬಂಧ ಆರೋಪ ಪ್ರಕರಣ: ವಿಠಲ ಮಲೆಕುಡಿಯ, ತಂದೆ ಲಿಂಗಣ್ಣ‌ ಮಲೆಕುಡಿಯ ನಿರ್ದೋಷಿ –  Vishwanews24

ಮಂಗಳೂರು : ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರು ನಿರ್ದೋಷಿಗಳು ಎಂದು ಗುರುವಾರ ಮೂರನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ವಿಠಲ್ ಮಲೆಕುಡಿಯ ಅವರ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು, ಹಲವು ಸಂಘಟನೆಗಳು, ರಾಜಕಾರಣಿಗಳು ಬೆಂಬಲ ಸೂಚಿಸಿದ್ದರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಹೋರಾಟ ನಡೆಸಿದ್ದರು.

ಬೆಳ್ತಂಗಡಿಯ ಕುತ್ಲೂರು ನಿವಾಸಿಯಾಗಿದ್ದ ವಿಠಲ್ ಮಲೆಕುಡಿಯ ಅವರನ್ನು 2012 ಮಾರ್ಚ್ 3 ರಂದು ನಕ್ಸಲ್ ನಿಗ್ರಹ ಪಡೆ ಬಂಧಿಸಿತ್ತು.

ನಕ್ಸಲ್ ನಿಗ್ರಹ ಪಡೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ವಿಠಲ್ 6 ನೇ ಆರೋಪಿಯಾಗಿದ್ದು, ತಂದೆ 7 ನೇ ಆರೋಪಿಯಾಗಿದ್ದರು.

ಬಂಧನಕ್ಕೊಳಗಾದ ಬಳಿಕ ಕೈಕೊಳ ತೊಟ್ಟುಕೊಂಡೇ ಪರೀಕ್ಷೆ ಬರೆದದ್ದು ಭಾರಿ ಸುದ್ದಿಯಾಗಿತ್ತು.ವಿಠಲ ಮಲೆಕುಡಿಯ ರಕ್ಷಣೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಾಟ್ ಬೆಂಬಲ ಸೂಚಿಸಿದ್ದರು.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. 2021 – 22 ನೇ ಸಾಲಿನ ಅರ್ಧ ವಾರ್ಷಿಕದಲ್ಲಿ ಒಟ್ಟು ರೂ. 4.60 ಕೋಟಿ ಲಾಭ : ಯಶ್‌ಪಾಲ್ ಎ. ಸುವರ್ಣ – Vishwanews24