ಮಂಗಳೂರು: ನಗರದ ಪ್ರತಿಷ್ಟಿತ ಮಳಿಗೆಯಾದ ಸಿಟಿಸೆಂಟರ್ ನಲ್ಲಿ ಅಕಸ್ಮಿಕ ಬೆಂಕಿ – Vishwanews24
ಮಂಗಳೂರು,: ಮಂಗಳೂರು ನಗರದ ಪ್ರತಿಷ್ಟಿತ ಮಳಿಗೆಯಾದ ಸಿಟಿ ಸೆಂಟರ್ ನ ಏಳನೇ ಮಹಡಿಯಲ್ಲಿ ಶಾಟ್ ಸರ್ಕೂಟ್ ನಿಂದಾಗಿ ಬೆಂಕಿ ಹಚ್ಚಿಕೊಂಡಿದೆ.
ಬೆಂಕಿಯಿಂದ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿ ಬಂದ ಪಾಂಡೇಶ್ವರ ಆಗ್ನಿ ಶಾಮಕ ದಳ ಪರಿಸ್ಥಿತಿಯನ್ನು ನಿಯಂತ್ರಿಸಿದೆ.
ಅಧಿಕಾರಿಗಳ, ಜನಪ್ರತಿನಿಧಿಗಳ ಶಿಫಾರಿಸ್ಸಿನ ಮೇಲೆ ಇಂದಿನವರೆಗೂ ನಡೆದುಕೊಂಡು ಬಂದಿರುವ ಈ ಮಳಿಗೆಯಲ್ಲಿ ಇದೀಗ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಸಂಪೂರ್ಣ ಬಂದ್ ಆಗಿರುವ ಈ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದಲ್ಲಿ ಅಗ್ನಿಶಾಮಕ ದಳಕ್ಕೂ ಕಂಟ್ರೋಲ್ ಮಾಡಲಾರದಂತಹ ಸ್ಥಿತಿಯಿರುವ ಕಾರಣ ಅಗ್ನಿಶಾಮಕ ದಳ ಇಂದಿನವರೆಗೂ ಈ ಮಳಿಗೆಗೆ ಫೈರ್ ಸೇಫ್ಟಿ ಕ್ಲಿಯರೆನ್ಸ್ ನೀಡಿಲ್ಲ.
