ಮಂಗಳೂರು: ನಗರದಲ್ಲಿ ಹೆದ್ದಾರಿ ದರೋಡೆಗೆ ಸಂಚು ರೂಪಿಸುತ್ತಿದ್ದ 8 ಮಂದಿ ಆರೋಪಿಗಳು ಪೊಲೀಸರ ವಶಕ್ಕೆ -Vishwanews24
ಮಂಗಳೂರು: ನಗರದಲ್ಲಿ ಹೆದ್ದಾರಿ ದರೋಡೆಗೆ ಸಂಚು ರೂಪಿಸುತ್ತಿದ್ದ 8 ಮಂದಿ ಆರೋಪಿಗಳು ಪೊಲೀಸರ ವಶಕ್ಕೆ -Vishwanews24
ಮಂಗಳೂರು: ನಗರದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಮಾಡಲು ಸ್ಥಳೀಯವಾಗಿ ಸಿದ್ಧತೆ ಮಾಡಿಕೊಂಡ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಮಾರ್ನಮಿಕಟ್ಟೆ ನಿವಾಸಿ ತೌಸಿ (@ ಪತ್ತೊಂಜಿ ತೌಸಿರ್, ಪ್ರಾಯ(28), ಫರಂಗೀಪೇಟೆ ನಿವಾಸಿ ಮೊಹಮ್ಮದ್ ಅರಾಫತ್ (@ ಅರಫಾ(29), ಬಂಟ್ವಾಳ ನಿವಾಸಿ ನಾಸೀರ್ ಹುಸೈನ್(29), ಮೊಹಮ್ಮದ್ ರಫೀಕ್ (37), ಮೊಹಮ್ಮದ್ ಸಫ್ಘಾನ್ @ ಸಫ್ಘಾನ್(25), ಮೊಹಮ್ಮದ್ ಜೈನುದ್ದೀನ್(24), ಉನೈಝ್ @ ಮೊಹಮ್ಮದ್ ಉನೈಮ್, ಪ್ರಾಯ(26) ಎಂದು ಗುರುತಿಸಲಾಗಿದೆ
ಎಪ್ರೀಲ್ 12 ರಂದು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕೊರೊನಾ ನೈಟ್ ಕಷ್ಟೂ ಬಗ್ಗೆ ರಾತ್ರಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಲಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಇನ್ನೋವಾ ಕಾರೊಂದನ್ನು ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿ ಮಾರಕಾಯುಧಗಳೊಂದಿಗೆ ಗುಂಪಾಗಿ ನಿಂತುಕೊಂಡು ರಸ್ತೆಯಲ್ಲಿ ಹಾದು ಹೋಗುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಲು ಪ್ರಯತ್ನಿಸುತ್ತಿದ್ದ ಸಮಯ ಅಲ್ಲಿಗೆ ಪಡೆದುಕೊಳ್ಳಲಾಗಿರುತ್ತದೆ. ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಮಂಗಳೂರು ನಗರದ ಹೊರವಲಯದಲ್ಲಿ ಹೆದ್ದಾರಿ ದರೋಡೆಗೆ ಸಂಚು ರೂಫಿಸಿ ಮಂಗಳೂರು ಪರಾರಿ ಎಂಬಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿ ದರೊಡೆಗೆ ಯತ್ನಿಸುತ್ತಿದ್ದರು. ಆರೋಪಿಗಳ ವಶದಿಂದ ತಲವಾರು-2, ಚೂರಿ-2, ಡ್ರಾಗನ್ ಚೂರಿ-1, ಮೊಬೈಲ್ ಫೋನ್ಗಳು-8, ಮಂಕಿ ಕ್ಯಾಪ್-5. ಮೆಣಸಿನ ಹುಡಿ ಪ್ಯಾಕೆಟ್-3, ಕೆಎ-09-ಎನ್-7886 ನೇ ಇನ್ನೋವಾ ಕಾರು ಹೀಗೆ ಒಟ್ಟು 10,89.490/- ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಡಿಸಿಪಿ ಹರಿರಾಂ ಶಂಕರ್ ಐ.ಪಿ.ಎಸ್ ಹಾಗೂ ಅಪರಾಧ & ಸಂಚಾರ ವಿಭಾಗದ ಡಿಸಿಪಿಯವರಾದ ವಿನಯ್ ಎ ಗಾಂವರ್ ಮಾರ್ಗದರ್ಶನದಲ್ಲಿ ಮಂಗಳೂರು ಸಿಬಿ ಘಟಕದ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ರವರಾದ ರಾಜೇಂದ್ರ ಚಿ, ಪ್ರದೀಪ್ ಟಿ ಆರ್ ಮತ್ತು ಸಿಸಿಬಿ ಸಿಬ್ಬಂದಿಗಳು ಈ ಕಾರ್ಯಾಚರಣೆಯನ್ನು ಭಾಗವಹಿಸಿದ್ದರು.
