ಮಂಗಳೂರು: ನಾಳೆ ಜಯ ಸಿ. ಸುವರ್ಣ ಅವರ ಪ್ರಥಮ ವರ್ಷದ ಸಂಸ್ಮರಣೆ, ಸಭಾಂಗಣ ನಾಮಕರಣ ಸಮಾರಂಭ – Vishwanews24
ಮಂಗಳೂರು: ನಾಳೆ ಜಯ ಸಿ. ಸುವರ್ಣ ಅವರ ಪ್ರಥಮ ವರ್ಷದ ಸಂಸ್ಮರಣೆ, ಸಭಾಂಗಣ ನಾಮಕರಣ ಸಮಾರಂಭ – Vishwanews24
ಮಂಗಳೂರು: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ(ರಿ.) ಮೂಲ್ಕಿ ಇದರ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಜಯ ಸಿ. ಸುವರ್ಣ ಅವರ ಪ್ರಥಮ ವರ್ಷದ ಸಂಸ್ಮರಣೆ, ಸ್ಮಾರಕಬಿಂಬ ಅನಾವರಣ ಹಾಗೂ ಜಯ. ಸಿ ಸುವರ್ಣ ಸಭಾಂಗಣ ನಾಮಕರಣ ಸಮಾರಂಭ ನಾಳೆ (ಅ.31)ರಂದು ನಡೆಯಲಿದೆ.
ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಜಯ ಸಿ. ಸುವರ್ಣ ಪ್ರತಿಮೆ ಅನಾವರಣ ಮಾಡಲಿದ್ದಾರೆ. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ್ ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ.ಗಣೇಶ್ ಅಮೀನ್ ಸಂಕಮಾರ್ ಅವರು ಸಂಸ್ಮರಣ ಭಾಷಣ ನಡೆಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.
ದಿ.ಜಯ ಸಿ ಸುವರ್ಣ ಅವರ ಧರ್ಮ ಪತ್ನಿ ಲೀಲಾವತಿ ಜಯ ಸುವರ್ಣ ಗೌರವ ಉಪಸ್ಥಿತಿ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಟ್ಲ: ನೇಣು ಬಿಗಿದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಶವ ಪತ್ತೆ – Vishwanews24

