ಮಂಗಳೂರು : ನಿಯಂತ್ರಣ ತಪ್ಪಿ ಕಾರು ಪಲ್ಟಿ: ಇಬ್ಬರಿಗೆ ಗಾಯ – vishwanews24
ಮಂಗಳೂರು : ನಿಯಂತ್ರಣ ತಪ್ಪಿ ಕಾರು ಪಲ್ಟಿ: ಇಬ್ಬರಿಗೆ ಗಾಯ
ಮಂಗಳೂರು : ಮಂಗಳೂರು ನಗರದ ಕುಂಟಿಕಾನ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಾರಿ ಮಳೆಯ ಕಾರಣ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.
ಶುಕ್ರವಾರ ಮುಂಜಾನೆ ಈ ದುರ್ಘಟನೆ ನಡೆದಿದ್ದು ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕೂಳೂರು ಕಡೆಯಿಂದ ಕೆಪಿಟಿ ಕಡೆಗೆ ಬರುತ್ತಿದ್ದ ಕಾರು ಕುಂಟಿಕಾನ ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ಡಾಗಿ ರಸ್ತೆ ವಿಭಜಕದ ಮಧ್ಯೆ ಬಿದ್ದಿದೆ. ಇದರಿಂದ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಆತನ ಪುತ್ರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಕಾಪು : ಭಾರೀ ಗಾಳಿ-ಮಳೆಗೆ ನೆರೆ ಭೀತಿ – ಹಲವಾರು ಮನೆ ಜಲಾವೃತ ; ಜನರಲ್ಲಿ ಆತಂಕ – vishwanews24
