ಮಂಗಳೂರು : ಪೇಜಾವರ ಸ್ವಾಮೀಗಳ ಹೇಳಿಕೆ ಅರ್ಥ ಮಾಡಿಕೊಳ್ಳದೆ ಅವರ ಬಗ್ಗೆ ಸುಳ್ಳು ಹೇಳಿಕೆಗಳು ಖಂಡನೀಯ : ಶರಣ್ ಪಂಪ್ವೆಲ್ – viswhanews24

Featured, ದಕ್ಷಿಣ ಕನ್ನಡ

ಮಂಗಳೂರು : ಪೇಜಾವರ ಸ್ವಾಮೀಗಳ ಹೇಳಿಕೆ ಅರ್ಥ ಮಾಡಿಕೊಳ್ಳದೆ  ಶ್ರೀ ಗಳ ಬಗ್ಗೆ ಸುಳ್ಳು ಹೇಳಿಕೆಗಳು ಖಂಡನೀಯ : ಶರಣ್ ಪಂಪ್ವೆಲ್

ಮಂಗಳೂರು: ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿಯವರ ಸಂವಿಧಾನ ಬದ್ಧತೆ ಪ್ರಶ್ನಾತೀತ ಮತ್ತು ಅವರ ಬಗ್ಗೆ ತಪ್ಪು ಹೇಳಿಕೆಗಳು ಖಂಡನೀಯ ಎಂದು ವಿಶ್ವ ಹಿಂದೂ ಪರಿಷದ್ ಎಂದು ಹೇಳಿದೆ.

ಪೇಜಾವರ ಸ್ವಾಮೀಜಿ ಅವರು ಸಂವಿಧಾನಕ್ಕೆ ಬದ್ಧರಾಗಿದ್ದು ಹಿಂದು ಸಮಾಜದ ಸರ್ವರಿಗೂ ಸಮಾನ ಗೌರವ ಕೊಡುತ್ತ ಬಂದಿದ್ದು ವಿಶೇಷವಾಗಿ ದಲಿತರನ್ನು ಕೂಡ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ನೋಡುತ್ತಿದ್ದಾರೆ .ರಾಜ್ಯಪಾಲರನ್ನು ಭೇಟಿಯಾದಾಗ ವಿಶ್ವ ಹಿಂದೂ ಪರಿಷದ್ ಪದಾಧಿಕಾರಿಗಳು ಜೊತೆ ಗೆ ಇದ್ದೆವು .ಆ ಸಂದರ್ಭ ಸಂವಿಧಾನವನ್ನು ಬದಲಾಯಿಸವ ಯಾವ ಹೇಳಿಕೆ ಹೇಳಿರುವುದಿಲ್ಲ. ಆದರೂ ಕೆಲವೊಂದು ಸಂಘಟನೆಗಳು ಸ್ವಾಮಿಜಿಯವರ ಹೇಳಿಕೆ ಯನ್ನು ಅರ್ಥ ಮಾಡಿಕೊಳ್ಳದೆ ಶ್ರೀ ಗಳ ಬಗ್ಗೆ ಸುಳ್ಳು ಸುದ್ದಿ ಹೇಳಿಕೆ ನೀಡುತ್ತಿರುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ .

ಕಡಬ : ಜೆಸಿಐ ತರಬೇತುದಾರ, ಖ್ಯಾತ ನಿರೂಪಕ ಶಾಲಾ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ ಹೃದಯಾಘಾತದಿಂದ ನಿಧನ – vishwanews24

ಪೇಜಾವರ ಸ್ವಾಮೀಜಿಯವರ ಬಗ್ಗೆ ತಪ್ಪು ಹೇಳಿಕೆ ನೀಡಿದ್ದನ್ನು ಆಯಾ ಸಂಘಟನೆಯವರು ಹಿಂದೆ ತೆಗೆದುಕೊಳ್ಳಬೇಕು ಮತ್ತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ತು ಸರಕಾರ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply