ಮಂಗಳೂರು: ಪ್ರಾಕೃತಿಕ ವಿಕೋಪ ಪ್ರದೇಶಗಳಿಗೆ ಯು.ಟಿ. ಖಾದರ್ ಭೇಟಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ದೆಹಲಿಯಿಂದ ಬೆಳಗ್ಗೆ ಮಂಗಳೂರು ತಲುಪಿದ ಮಾಜಿ ಸಚಿವ ಯು.ಟಿ. ಖಾದರ್ ಅವರು ಕ್ಷೇತ್ರ ಸಂಚಾರ, ಕಂಬಳಪದವು ಪ್ರಾಕೃತಿಕ ವಿಕೋಪ ಪ್ರದೇಶಗಳಿಗೆ ಭೇಟಿ ನೀಡಿದರು.

ಮಾಜಿ ಸಚಿವ ಯು.ಟಿ.ಖಾದರ್ ತನ್ನ ಸ್ವಕ್ಷೇತ್ರ ಮಂಗಳೂರು ವಿಧಾನ ಸಭಾ ಕ್ಷೇತ್ರದ ಮುಡಿಪು ಕಂಬಳಪದವು ಬಳಿ ಭಾರೀ ಮಳೆಯಿಂದಾಗಿ ಮನೆಗೆ ನೀರು ನುಗ್ಗಿದ್ದ ಮನೆಗಳಿಗೆ ಹಾಗು ಇನ್ಫೋಸಿಸ್ ಆವರಣ ಗೋಡೆ ಕುಸಿದು ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಹಶೀಲ್ದಾರ್, ತಾಲೂಕು ಪಂಚಾಯತ್ ಅಧ್ಯಕ್ಷರು, ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರು, ಲೋಕೋಪಯೋಗಿ ಇಲಾಖಾ ಅಧಿಕಾರಿ, ಮೆಸ್ಕಾಂ ಅಧಿಕಾರಿಗಳು ಹಾಗೂ ಇನ್ಫೋಸಿಸ್ ಅಧಿಕಾರಿಗಳ ತಂಡ ರಚಿಸಿ ಅವಲೋಕನ ನಡೆಸಿ ಶೀಘ್ರ ಸಭೆ ಕರೆದು ಶಾಶ್ವತ ಪರಿಹಾರ ಒದಗಿಸಲು ತಹಶೀಲ್ದಾರರಿಗೆ ಶಾಸಕ ಯು.ಟಿ.ಖಾದರ್ ಆದೇಶ ನೀಡಿದರು.